ಸುಮಾರು 2 ವರ್ಷಗಳ ಕೆಳಗೆ TCS ಗೆ ನಾನು ಸೇರಿದ ನಂತರ, ಒರಿಸ್ಸಾದ ಭುವನೇಶ್ವರ್ನಲ್ಲಿ 1st phase training ಇತ್ತು. Training ಮುಗಿಸಿಕೊಂಡು ಟ್ರೈನ್ನಲ್ಲಿ ಬೆಂಗಳೂರಿಗೆ ವಾಪಸು ಬರುವಾಗ, ಅಲ್ಲಿ ಆದ ಸುಂದರ ಅನುಭವಗಳನ್ನ ಕುರಿತಾಗಿ ಪದ್ಯ ಬರೆದೆ, ಸ್ನೇಹಿತರಿಗೆ ತೋರಿಸಿ ಖುಷಿ ಹಂಚಿಕೊಂಡಿದ್ದೆ. ಭುವನೇಶ್ವರ್ ನನ್ನ ಜೀವನದಲ್ಲಿ ಕರ್ನಾಟಕದಿಂದ ಹೊರ ಹೋಗಿ ನಾನು ನೋಡಿದ ಮೊದಲ ಸ್ಥಳ. ಒಂದು ರೀತಿ ಮರೆಯಲಾಗದಂತ ಅನುಭವಗಳನ್ನ ಭುವನೇಶ್ವರ್ ನನಗೆ ನೀಡಿದೆ ಎಂದರೆ ತಪ್ಪಾಗೋಲ್ಲ. ಕೆಳಗಿನ 4 stanzaಗಳಲ್ಲಿ ಭುವನೇಶ್ವರ್ ಚಿತ್ರಣ ಮಾಡಿಲ್ಲವಾದರೂ ಮುಂದೆಂದಾದರೂ ಅದರ ಬಗ್ಗೆ ಒಂದು ಲೇಖನ ಬರೆಯುವ ಪ್ರಯತ್ನ ಖಂಡಿತ ಮಾಡುವೆ.
ಆಕಸ್ಮಾತಾಗಿ ಇಂದು ದೊರೆತ ಆ ಕವನ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಹೀಗಿವೆ ಆ ಸಾಲುಗಳು,
ಒಲ್ಲದ ಮನಸ್ಸಿನಿಂದ ಹೊರಡುತಿರುವೆ
ಒಲುಮೆಯ ಊರಿನೆಡೆಗೆ
ಕಳೆದ ಕೆಲವು ದಿನಗಳು ಕಾಡುತಿವೆ
ಮರೆಯಲಾಗದಷ್ಟು, ಅಡಿಗಡಿಗೆ
ಜೀವನದ ಪಯಣದಲ್ಲಿ ನಿಲ್ದಾಣಗಳೇ ಇಲ್ಲದಿದ್ದಿದ್ದರೆ ಹೇಗಿರುತ್ತಿತ್ತು..?
I am really missing Bhuvaneshwar !!
ರವಿ ಮೂಡದೆ ಬೆಳಕಾಗದಿದ್ದರೆ ಹೇಗಿರುತ್ತಿತ್ತು..?
ಬೆಳಕಿಲ್ಲದೆ ಬದುಕಬೇಕಿದ್ದರೆ ಹೇಗಿರುತ್ತಿತ್ತು..?
ಅಪರಿಚಿತರೊಡನೆ ಅವಿನಾಭಾವವಾಗಿ ಬೇರೆಯದಿದ್ದರೆ ಹೇಗಿರುತ್ತಿತ್ತು..?
I am really missing Room 3, Block 22, Phase 2
ಹಕ್ಕಿಗಳು ಹಾರದಿದ್ದರೆ ಹೇಗಿರುತ್ತಿತ್ತು..?
ಮನುಷ್ಯನಿಗೆ ಸಂಪನ್ಮೂಲಗಳೇ ಬೇಕಿರದಿದ್ದರೆ ಹೇಗಿರುತ್ತಿತ್ತು..?
ಅವಶ್ಯಕತೆಗಳೆಲ್ಲಾ ಪೂರೈಕೆಯಾಗದಿದ್ದರೆ ಹೇಗಿರುತ್ತಿತ್ತು..?
ಸುಂದರ ವೇದಿಕೆಗೆ ಸದಸ್ಯರಾಗದಿದ್ದರೆ ಹೇಗಿರುತ್ತಿತ್ತು..?
I am really missing ILP centre of TCS
ಪರಸ್ಪರ ಆಕಸ್ಮಿಕ ಭೇಟಿಗಳಾಗದಿದ್ದರೆ ಹೇಗಿರುತ್ತಿತ್ತು..?
ಆ ಭೇಟಿಗಳಲ್ಲಿ ಬಯಸಿದವರು ಸಿಕ್ಕರೆ ಹೇಗಿರುತ್ತಿತ್ತು..?
ಬಯಸಿದವರು ಜೀವನದ ಭಾಗಿಯಾದರೆ ಹೇಗಿರುತ್ತಿತ್ತು..?
ಭಾಗಿಯಾಗಿ ಬಂಧಿಸಲ್ಪಟ್ಟಿದ್ದರೆ ಹೇಗಿರುತ್ತಿತ್ತು..?
I am truly missing .........