ಬುಧವಾರ, ಸೆಪ್ಟೆಂಬರ್ 28, 2011

Feel the joy of giving ಎಂದ ಮಹಾನುಭಾವ

ಹೆಚ್ಚೆಂದರೆ ಸಾಮಾನ್ಯರಾದ ನಾವುಗಳು ನೊಂದವರ ಅಭ್ಯದಯಕ್ಕೆ ಏನನ್ನ ನಮ್ಮ ಜೀವನದಲ್ಲಿ ತ್ಯಾಗ ಮಾಡಬಹುದು? ಹೆಚ್ಚಿನ ಜನರ ಕಣ್ಣೆದುರಿಗೆ ಬರುವುದು ನಿರ್ಜೀವ ವಸ್ತುಗಳು ಮಾತ್ರ. ಆದರೆ ಇಡೀ ಜೀವನವನ್ನು ಪರರ ಅಭ್ಯುದಯಕ್ಕಾಗಿ ಮೀಸಲಿಡುವವರು ಕೆಲವರಲ್ಲಿ ಕೆಲವರು ಮಾತ್ರ. ಮತ್ತೊಬ್ಬರ ಒಳ್ಳೆಯದಕ್ಕಾಗಿ ಒಂದು ಹೆಜ್ಜೆ ಮುಂದೆ ಹೋಗಿ ಜೀವವನ್ನ ಕಳೆದುಕೊಳ್ಳಬಹುದು ಆದರೆ ಇಡೀ ಜೀವನವನ್ನು ಬೇರೆಯವರಿಗಾಗಿ ಕಳೆಯುವುದು ಕೆಲವು ಮಂದಿಗೆ ಮಾತ್ರ ಸಾಧ್ಯ. ತನ್ನ ಸ್ವಾರ್ಥ, ಆಸೆ, ಆಕಾಂಕ್ಷೆ, ಸ್ವಂತ ಕುಟುಂಬದ ಹಿತಾಸಕ್ತಿಗಳನ್ನು ಬದಿಗಿಟ್ಟು ಮಾನಸಿಕವಾಗಿ ಅಸ್ವಸ್ಥರಾಗಿರುವವರ, ದೈಹಿಕವಾಗಿ ಕುಗ್ಗಿರುವವರ, ಆರ್ಥಿಕವಾಗಿ ನಿರ್ಗತಿಕರಾಗಿರುವವರ, ಸಾಮಾಜಿಕವಾಗಿ ದೂಡಲ್ಪಟ್ಟಿರುವವರ, ಪ್ರಜಾಪ್ರಭುತ್ವದ ದೇಶದಲ್ಲಿ ತಮ್ಮೆಲ್ಲ ಹಕ್ಕುಗಳಿಂದ ವಂಚಿತರಾಗಿರುವವರ ಉನ್ನತಿಕರಣಕ್ಕೆ ಕಳೆದ ೮ ವರ್ಷಗಳಿಂದ ಶ್ರಮಿಸುತ್ತಿದ್ದಾರೆ ಮಧುರೈನ ನಾರಾಯಣನ್ ಕೃಷ್ಣನ್ ಎಂಬ ಮಹಾನುಭಾವ..!!

ಆರ್ಥಿಕವಾಗಿ ಅಷ್ಟೇನೂ ಶ್ರೀಮಂತರಲ್ಲದ ಒಂದು ಸ್ಟಾರ್ ಹೋಟೆಲ್ ನಲ್ಲಿ ಮುಖ್ಯ ಬಾಣಸಿಗನಾಗಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣನ್ ಗೆ ವಿದೇಶದಲ್ಲಿ ಕೆಲಸದ ಆಹ್ವಾನ ಬರುತ್ತದೆ. ಎಲ್ಲ ರೀತಿಯಲ್ಲೂ ಸನ್ನದ್ಧರಾಗಿ ಹೊರಡುವ ಸಂದರ್ಭದಲ್ಲಿ ಆಕಸ್ಮಾತಾಗಿ ಕಣ್ಣಿಗೆ ಬೀಳುವ ದೃಶ್ಯ ಅವರ ಇಡೀ ಜೀವನವನ್ನೇ ಬದಲಿಸಿಬಿಡುತ್ತದೆ. ಮಾನಸಿಕ ಅಸ್ವಸ್ಥನಾಗಿರುವ ಒಬ್ಬ ವ್ಯಕ್ತಿ ತನ್ನ ಮಲವನ್ನ ತಾನೇ ತಿನ್ನುತ್ತಿದ್ದ ದೃಶ್ಯ ಅವರ ಕಣ್ಣಿಗೆ ಬೀಳುತ್ತದೆ. ತಕ್ಷಣ ಪಕ್ಕದ ಹೋಟೆಲ್ ನಿಂದ ಇಡ್ಲಿ ಕಟ್ಟಿಸಿಕೊಂಡು ಬಂದು ಆತನ ಕೈಗಿಡುತ್ತಾರೆ. ಅವರು ಹೇಳುವ ಪ್ರಕಾರ ಅಷ್ಟು ವೇಗವಾಗಿ ಒಬ್ಬ ಮನುಷ್ಯ ಊಟ ಮಾಡಿದ್ದನ್ನ ಅವರೆಂದಿಗೂ ಕಂಡಿರಲಿಲ್ಲವಂತೆ. ಊಟ ಮುಗಿಸಿದಾತ ಹೊಟ್ಟೆ ತುಂಬಿಸಿದಾತನಿಗೆ ಧನ್ಯವಾದ ಅರ್ಪಿಸುವ ರೀತಿಯಲ್ಲಿ ಕೃಷ್ಣನ್ ರ ಕೈ ಹಿಡಿಯುತ್ತಾನೆ. ಆತನ ಕೃತಜ್ಞತಾಪೂರ್ವಕ ಸ್ಪರ್ಶ ಕೃಷ್ಣನ್ ರಿಗೆ ಅದ್ಭುತ ಅನುಭವವನ್ನ ನೀಡುತ್ತದೆ. ಯಾವ ಸಕಲ ಅಷ್ಟ ಐಶ್ವರ್ಯಗಳೂ ನೀಡದ ತೃಪ್ತಿ ನೀಡುತ್ತದೆ. ಮನಸ್ಸಿಗೆ ಸುಖ ನೆಮ್ಮದಿಯನ್ನ ನೀಡುತ್ತದೆ. ಅಂದಿನ ಅವರ ಅನುಭವ ತಮ್ಮ ಇಡೀ ಜೀವನವನ್ನ ಬಹಳ ಅರ್ಥಪೂರ್ಣವಾಗಿ ಕಳೆಯಲು ಪ್ರೇರೇಪಿಸುತ್ತದೆ.

ಸುಮಾರು ೮ ವರ್ಷಗಳ ಹಿಂದೆ ಆರಂಭವಾದ ಕೃಷ್ಣನ್ ರ ಅಕ್ಷಯ ಟ್ರಸ್ಟ್ ೧.೭ ಮಿಲಿಯನ್ನಷ್ಟು ಊಟವನ್ನ ನಿರ್ಗತಿಕರಿರುವೆಡೆಗೆ ತಲುಪಿಸಿದೆ. ತಮ್ಮ ಮನೆಯೇ ಅಧಿಕೃತ ಕಾರ್ಯಾಲಯವಾಗಿದೆ, ಅಡುಗೆಮನೆಯಾಗಿದೆ. ಅವರದೇ ಸ್ವಂತ ದುಡ್ಡಿನಿಂದ ಪ್ರತಿದಿನ ಅಡುಗೆ ಮಾಡಿ ತಮ್ಮ ವ್ಯಾನ್ ನಲ್ಲಿ ಇಟ್ಟುಕೊಂಡು ಮಾನಸಿಕ ಅಸ್ವಸ್ಥರನ್ನ ಹುಡುಕಿ, ಊಟ ಮಾಡಿಸಿ ಬರುವುದು ವಾಡಿಕೆಯಾಗಿದೆ. ಅಷ್ಟೇ ಅಲ್ಲದೆ ಅವರಿಗೆ ಸ್ನಾನ ಮಾಡಿಸುವುದು, ಹೇರ್ ಕಟ್ ಮಾಡುವುದು, ಊಟ ತಿನ್ನಿಸುವುದು ಎಲ್ಲವನ್ನೂ ತಾಯಿ ಮಕ್ಕಳಿಗೆ ಮಾಡುವಷ್ಟು ಪ್ರೀತಿ, ಅಕ್ಕರೆ, ಕಾಳಜಿಯಿಂದ ಮಾಡುತ್ತಾ ಬಂದಿದ್ದಾರೆ. ಎಷ್ಟೋ ಬಾರಿ ಮಾನಸಿಕ ಅಸ್ವಸ್ಥರಿಂದ ಒದೆ ತಿಂದದ್ದು ಉಂಟು.

ಸತತ ೮ ವರ್ಷಗಳಿಂದ ವಿಶ್ರಮಿಸದೆ ದುಡಿಯುತ್ತಿರುವ ಕೃಷ್ಣನ್ ಇಂದು ಅಕ್ಷಯ ಟ್ರಸ್ಟ್ ನ್ನು ಬೃಹದಾಕಾರವಾಗಿ ಬೆಳೆಸಿದ್ದಾರೆ. ನಿಸ್ವಾರ್ಥ ದಾನಿಗಳಿಂದ ಹಣ ಸಂಗ್ರಹಿಸಿ ನಿರ್ಗತಿಕರಿಗೆ ವಸತಿ ಕಲ್ಪಿಸುವ ಮಹತ್ತರ ಯೋಜನೆಯನ್ನು ಯಶಸ್ವಿಯಾಗಿ ಮುಗಿಸುವ ಹಂತಕ್ಕೆ ತಲುಪಿದ್ದಾರೆ. ಸುಮಾರು ೪೦೦ ಮಾನಸಿಕ ರೋಗಿಗಳಿಗೆ ಉಳಿಯಲು ಜಾಗ, ಶುಶ್ರೂಷೆಗೆ ಆಸ್ಪತ್ರೆ, ಸುಸಜ್ಜಿತ ಊಟದ ಶಾಲೆಗಳನ್ನೊಳಗೊಂಡ ಬೃಹತ್ ಕಟ್ಟಡವನ್ನು ಮುಗಿಸುವ ಹಂತದಲ್ಲಿದ್ದಾರೆ.

ಉತ್ತಮ ವಿದ್ಯಾವಂತನಾಗಿ ವಿದೇಶದಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕರೂ ಎಲ್ಲರಿಂದ ದೂಷಿಸಲ್ಪಡುವ ಮಾನಸಿಕ ರೋಗಿಗಳ ಸೇವೆಗೆ ಕೃಷ್ಣನ್ ಪಣ ತೊಟ್ಟಿದ್ದಾರೆ. ಇಂದು ಇಡೀ ಜಗತ್ತಿನಲ್ಲಿ ಲಕ್ಷಾಂತರ NGO ಗಳು ಕಾರ್ಯನಿರ್ವಹಿಸುತ್ತಿವೆ. ಬಡವರ, ನಿರ್ಗತಿಕರ, ರೋಗಿಗಳ ಅಭ್ಯುದಯವೇ ನಮ್ಮ ಮೂಲ ಉದ್ದೇಶ ಎಂಬ ಹಣೆಪಟ್ಟಿಯೊಂದಿಗೆ ಸುಲಿಗೆ ಮಾಡುತ್ತಿವೆ. ಸರಕಾರದಿಂದ ಜಾರಿಯಾಗುವಂತಹ ಪ್ರಾಜೆಕ್ಟ್ ಗಳನ್ನ ಭ್ರಷ್ಟ ಅಧಿಕಾರಿಗಳ ಜೊತೆ ಸೇರಿ ಪಡೆದುಕೊಂಡ ಹಣದ ದುರ್ಬಳಕೆ ಮಾಡುತ್ತಿದ್ದಾರೆ. ಎಷ್ಟೋ NGO ಗಳು ಖಾಸಗಿ ಕಂಪನಿಗಳಲ್ಲಿ, ಸರಕಾರೀ ಕಛೇರಿಗಳಲ್ಲಿ ಕೆಲಸ ಮಾಡುವ ನೌಕರರಿಂದಲೂ ತಿಂಗಳಿಗೆ ಇಂತಿಷ್ಟು ಹಣ ಎಂದು ವಸೂಲಿ ಮಾಡುತ್ತಾರೆಯೇ ಹೊರತು ಅದರ ಸದ್ವಿನಿಯೋಗ ಮಾಡಿಕೊಳ್ಳುವ ಗೋಜಿಗೆ ಹೋಗುತ್ತಿಲ್ಲ (ನನಗೂ ಹಾಗೂ ನನ್ನ ಸ್ನೇಹಿತರಿಗೂ ಆದ ಅನುಭವದ ಆಧಾರದ ಮೇಲೆ). NGO ಗಳು ದಾನದ ರೂಪದಲ್ಲಿ ಗಳಿಸುವ ಹಣದ ಲೆಕ್ಕ ಯಾರಿಗೂ ಕೊಡಬೇಕಾದ ಅವಶ್ಯಕತೆ ಇಲ್ಲದಿರುವುದನ್ನು ದುರುಪಯೋಗ ಮಾಡಿಕೊಂಡು ದೊಡ್ಡ ದಂಧೆ ಮಾಡುತ್ತಿದ್ದಾರೆ. ಇಂತಹ NGO ಗಳ ಮುಂದೆ ಕೃಷ್ಣನ್ ರ ಅಕ್ಷಯ ಟ್ರಸ್ಟ್ ಅಪವಾದವಾಗಿ ನಿಲ್ಲುತ್ತದೆ.

CNN IBN ನಡೆಸಿದ Top Ten Real Heroes ಕಾರ್ಯಕ್ರಮದಲ್ಲಿ ಪ್ರಪಂಚದ ಮೂಲೆ ಮೂಲೆಗಳಿಂದ ಪಾಲ್ಗೊಂಡಿದ್ದ ಲಕ್ಷಾಂತರ ಜನರ ನಡುವೆ ಸ್ಪರ್ಧಿಸಿ ಕೃಷ್ಣನ್ Top Ten Real Hero ಆಗಿ ಹೊರ ಹೊಮ್ಮಿದ್ದಾರೆ. ಆ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದ ಆಮೀರ್ ಖಾನ್ ಕೃಷ್ಣನ್ ರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ ಗೌರವಿಸಿದ್ದಾರೆ. ಸಮಾಜದ ಸ್ವಾಸ್ಥ್ಯ ಹದಗೆಟ್ಟರೆ ಅದಕ್ಕೆ ಬೇರೆಯವರು ಕಾರಣರಲ್ಲ. ಕಾರಣಕರ್ತರು ನಾವೇ. ಉತ್ತಮ ಶಿಕ್ಷಣ ಪಡೆದು ಸಾರ್ವಜನಿಕವಾಗಿ ವಿದ್ಯಾವಂತರೆನಿಸಿಕೊಂಡರಷ್ಟೇ  ಸಾಲದು, ನಮ್ಮ ನಮ್ಮ ಕರ್ತವ್ಯಗಳನ್ನರಿತು ಅದನ್ನು ಪಾಲಿಸಬೇಕಾಗಿದೆ. ಕೃಷ್ಣನ್ ರಂತೆ ಸಾಕಷ್ಟು ಜನ ಟ್ರಸ್ಟ್ ಗಳನ್ನ ನಡೆಸುತ್ತಿದ್ದಾರೆ. ಅಂತಹವರಿಗೆ ನಾವೆಲ್ಲಾ ಬೆನ್ನೆಲುಬಾಗಿ ನಿಲ್ಲಬೇಕಾಗಿದೆ. ಆಗ ಮಾತ್ರ ಸ್ವಾಸ್ಥ್ಯಭರಿತ ಪರಿಸರದ ನಿರ್ಮಾಣ ಸಾಧ್ಯ.

ಕೃಷ್ಣನ್ ಒಬ್ಬ ಬ್ರಾಹ್ಮಣರು, ವಿದ್ಯಾವಂತರು ಮೇಲಾಗಿ ಉತ್ತಮ ಮನಸ್ಸುಳ್ಳವರು. ಆದರೆ ಅವರು ಸಮಾಜ ಸೇವೆಯಲ್ಲಿ ತೊಡಗಿರುವುದೇ ಅವರಿಗೆ ಮುಳ್ಳಾಗಿ  ಪರಿಣಮಿಸಿದೆ. ಅವರ ಕೆಲಸ ನಮಗೆಲ್ಲಾ ಆದರ್ಶವಾಗಿ ಕಾಣುತ್ತಿದೆ. ಆದರೆ ಅವರನ್ನು ವರಿಸಲು ಒಬ್ಬ ಮಹಿಳೆಯೂ ಮುಂದೆ ಬಂದಿಲ್ಲ. ಆತ ಮಾಡುವ ಕೆಲಸಗಳಿಗೆ ನಾನು ಬೆಂಬಲ ಕೊಡುತ್ತೇನೆ ಎಂಬ ಮನಸು ಸಿಕ್ಕಿಲ್ಲ. ಯಾವುದೇ ವ್ಯಕ್ತಿ ಆತ ಗಂಡಾಗಲಿ, ಹೆಣ್ಣಾಗಲಿ ಆಸರೆಯೆಂಬುದು ಬೇಕಾಗುತ್ತದೆ. ಆಸ್ಥೆಯಿಂದ ಪ್ರೀತಿಸುವವರು ಬೇಕಾಗುತ್ತಾರೆ. ಜೀವನದ ಪಯಣದಲ್ಲಿ ಒಂದಲ್ಲ ಒಂದು ದಿನ ಒಂಟಿತನ ಕಾಡುತ್ತದೆ. ಕೊನೆಗೊಂದು ದಿನ ಜೀವನವೇ ಬೇಡವೆನಿಸುತ್ತದೆ. ಅಂತಹ ಮಾನಸಿಕ ಖಿನ್ನತೆಗೆ ಮನಸ್ಸು ಬಲಿಯಾಗಬಾರದೆಂದರೆ ಒಬ್ಬ ಸಂಗಾತಿ ಬೇಕಾಗುತ್ತದೆ.

ಮದರ್ ತೆರೇಸಾ ಕುಷ್ಟ ರೋಗಿಗಳನ್ನು ಪಾಲಿಸಿ, ಪೋಷಿಸಿ ತಮ್ಮ ಆಯುಷ್ಯವನ್ನೆಲ್ಲಾ ಅವರಿಗಾಗಿ ಮೀಸಲಿಟ್ಟಿದ್ದರು ಎಂಬುದನ್ನು ಕೇಳಿದ್ದೆವು. ಇಲ್ಲೊಬ್ಬ, ಮಾನಸಿಕ ಅಸ್ವಸ್ಥರ ಶ್ರೇಯೋಭಿವೃದ್ದಿಗೆ ಇಡೀ ಜೀವನವನ್ನು ಮುಡಿಪಿಟ್ಟುರುವುದನ್ನು ನೋಡುವ ಭಾಗ್ಯ ನಮ್ಮದಾಗಿದೆ.

ವಿಜಯಕರ್ನಾಟಕ ದಿನ ಪತ್ರಿಕೆಯಲ್ಲಿ ಸಂಪಾದಕರಾಗಿ ಕೆಲಸ ಮಾಡುತ್ತಿದ್ದ ವಿಶ್ವೇಶರ ಭಟ್ ಕೃಷ್ಣನ್ ರನ್ನು ಕುರಿತು 'ಮಧುರೈನ ಸಂತೆಯೊಳಗೊಬ್ಬ ಸಂತ' ಎಂಬ ಲೇಖನ ಬರೆದ್ದಿದ್ದರು. ಆ ಲೇಖನವೇ ನನ್ನೀ ಲೇಖನಕ್ಕೆ ಸ್ಫೂರ್ತಿ. ಕೃಷ್ಣನ್ ರ ಸಮಾಜಸೇವೆಗೆ ಈ ಲೇಖನದ ಓದುಗರು ಸಹಾಯಮಾಡಲೆಂಬ  ವಿನಂತಿಯೊಂದಿಗೆ, ಅವರ ಅಕ್ಷಯ ಟ್ರಸ್ಟ್ ನಿರ್ಗತಿಕರಿಗೆ, ಬಡವರಿಗೆ, ನೊಂದವರಿಗೆ ಅಕ್ಷಯ ಪಾತ್ರೆಯಾಗಲೆಂಬುದು ಈ ಲೇಖನದ ಆಶಯ. 

ಅಕ್ಷಯ ಟ್ರಸ್ಟ್ ವೆಬ್ ವಿಳಾಸ : http://www.akshayatrust.org/ 


ಶುಕ್ರವಾರ, ಸೆಪ್ಟೆಂಬರ್ 23, 2011

ಸ್ಪಂದನ-ಪ್ರತಿಸ್ಪಂದನ

ಮೋಡಗಳ ಸಮ್ಮಿಲನದಿ
ಸುರಿವ ಜಡಿ ಮಳೆಗೆ
ಧರೆ ಎದೆಯೊಡ್ಡಿ ಸ್ವಾಗತಿಸಿದೆ

ಹಾಲುಗಲ್ಲದ ಶಶಿಯ ಚುಂಬಿಸಲು
ಸಾಗರದಲೆಗಳ
ಭೋರ್ಗರೆತ ಮುಗಿಲುಮುಟ್ಟಿದೆ

ಹಕ್ಕಿಗಳ ನಾದಕೆ ಹೂಗಳ ಅಂದಕೆ
ಮನ ಸೋತ ಪ್ರಕೃತಿ
ನೆಲೆ ನೀಡಿ ಸಲಹುತಿದೆ

ಆ ಧರೆ, ಶಾಂತ ಸಾಗರ, ಸಹೃದಯಿ ಪ್ರಕೃತಿಗಳನು
ಶರಣಾಗಿಸಿದೆ, ಪ್ರೀತಿಯ ಬಂಧನ
ನನ್ನ ಸ್ಪಂದನಕೆ, ಯಾವಾಗ ನಿನ್ನ ಪ್ರತಿಸ್ಪಂದನ..??


ಸೋಮವಾರ, ಆಗಸ್ಟ್ 15, 2011

ಉಪೇಂದ್ರ ಎಂಬ MODERN ವೇದಾಂತಿ !!

ಚಿತ್ರ H2O (ನನ್ನ ಇಷ್ಟದ ಚಿತ್ರಗಳಲ್ಲಿ ಒಂದು ) :

'ನಾನು ನಂದು ಅನ್ನೋ ಸ್ವಾರ್ಥ ಬಿಟ್ಟು ನಿಂಗೆ ಕೆಟ್ಟದಾದ್ರೂ ಪರವಾಗಿಲ್ಲ ಬೇರೆಯವರಿಗೆ ಒಳ್ಳೆಯದಾಗಲಿ ಅನ್ನೋ ಒಳ್ಳೆ ಮನಸಿಟ್ಟು ಬೇರೆಯವರನ್ನ ನೋಡು. ವಿಕಾರವಾಗಿರೋದು ನನ್ನ ಮುಖ ಅಲ್ಲ ನಿನ್ನ ಮನಸ್ಸು. ಕೆಟ್ಟ ಮನಸಿಟ್ಟು ನೋಡುದ್ರೆ ಎಲ್ಲಾ ವಿಕಾರವಾಗೆ ಕಾಣ್ಸುತ್ತೆ. ಒಳ್ಳೆ ಮನಸಿಟ್ಟು ನೋಡು ಎಲ್ಲಾ ಸುಂದರವಾಗೇ ಕಾಣ್ಸುತ್ತೆ Idiot. ಬಿಕ್ಷುಕ ಕಷ್ಟಪಡ್ತಿನಿ ಅಂದ ಅವನಿಗೆ ಒಂದು ಬೈಕ್ ಕೊಡ್ಸಿದಿನಿ. ರೈತ ಕಷ್ಟಪಡ್ತಿನಿ ಅಂದ ಅವನಿಗೆ ಹೊಲ ಕೊಡ್ಸಿದಿನಿ. 90X60 ಬಡವರಿಗೆ ಬಿಟ್ಟು ಕೊಡು 10X20 ಲಿ ನೀನ್ ಮನೆ ಕಟ್ಕೊ. ನಿಂಗೆ ಬೇಕಾದ್ದನ್ನ ಇಟ್ಕೊಂಡು ಉಳಿದಿದ್ದನ್ನ ಬೇರೆಯವರಿಗೆ ಕೊಡೋದು ತಪ್ಪಲ್ಲ. ನೀನ್ Discovery channel ನೋಡಿದಿಯಾ, ಅದರಲ್ಲಿ ಒಂದು ಬಲಿಷ್ಟವಾದ ಪ್ರಾಣಿ ಒಂದು ಸಣ್ಣ ಪ್ರಾಣಿನ ಕಿತ್ತು ತಿನ್ನುತ್ತೆ, ಅದೇ ರೀತಿ ಮನುಷ್ಯನು ತನ್ನ ಬುದ್ದಿವಂತಿಕೆ ಉಪಯೋಗಿಸಿ ಒಬ್ಬನ್ನೊಬ್ಬ ಹೊಡೆದು ಬದುಕ್ತಾನೆ ಅದು ಸರಿ ಅಂತಿಯಾ ?. ಈ ಸಮಾಜದಲ್ಲಿ ಬುದ್ದಿವಂತರು, ದಡ್ಡರು, ಶಕ್ತಿ ಇರೋರು, ದುರ್ಬಲರು ಎಲ್ಲಾ ಇದಾರೆ. ಹಂಚಿಕೊಂಡು ಬದುಕೋದರಲ್ಲಿ ಒಂಥರಾ ಸುಖ ಇದೆ. ದಯವಿಟ್ಟು ಕೈ ಮುಗಿದು ಕೇಳ್ಕೊತೀನಿ ಆ ಸೈಟ್ ನನ್ ಹೆಸರಿಗೆ ಬರಿ ನಾನ್ ಜನಕ್ಕೆ ಕೊಡ್ತೀನಿ.'

ಚಿತ್ರ A :

'ಏನ್ ತಮಾಷೆ ಮಾಡ್ತಾ ಇದ್ದೀಯ ಇಲ್ಲಿ? ಏನ್ ಆಟ ಆಡ್ತಾ ಕೂತಿದಿಯಾ ಇಲ್ಲಿ?, ದೇಶ ಬೆಂಕಿ ಹತ್ತಿ ಉರಿತಾ ಇದೆ. ಬಡ ಜನ್ರು,
ಒಳ್ಳೆ ಜನ್ರ ಹೊಟ್ಟೆ ಉರಿತಾ ಇದೆ. ಶ್ರೀಮಂತ್ರ ಹೊಟ್ಟೆ ಊದ್ತಾ ಇದೆ. ಏನ್ ಮಜಾ ತಗೊಂಡ್ ಕೂತಿದಿಯಾ ಇಲ್ಲಿ ? ಎಷ್ಟೊಂದ್ ಖರ್ಚು!! ಖರ್ಚು!!.. ಯಾಕ್ ಗಣೇಶ.., ನೀನ್ ಸರ್ವಶಕ್ತ ತಾನೇ ಯಾಕ್ ಈ ರೀತಿ ಜನಗಳ ಕೈಲಿ ಒಳ್ಳೇದು ಕೆಟ್ಟದ್ದು ಅಂತ ಮಾಡ್ಸಿ ಪಾಪಿ, ಪುಣ್ಯವಂತ ಅಂತ ಮಾಡ್ತಿಯಾ?, ಯಾಕ್ ಈ ರೀತಿ ತೊಂದ್ರೆಗಳ್ನಾ ಕೊಡ್ತಿಯಾ?. ಕೆಟ್ಟವ್ರ್ನೆಲ್ಲಾ ಸಾಯಿಸ್ಬಿಡು ಒಳ್ಳೆವ್ರ್ನೆಲ್ಲಾ ಚೆನ್ನಾಗಿಡು. ತಗೋ (ಗನ್ ಕೊಡುತ್ತಾ ) ತಾಕತ್ ಇದ್ರೆ ಸಾಯಿಸ್ಬಿಟ್ ಬಾ ಹೋಗು. ಆಗಲ್ಲಾ!!.. ನಿನ್ ಕೈಲಿ ಆಗಲ್ಲಾ!!.. ಯಾಕೆ ಅಂತ ನಂಗ್ ಗೊತ್ತು. ಜನಗಳ್ಗೆ ಕಷ್ಟ ಕೊಟ್ರೆ ತಾನೇ ನಿನ್ ಹತ್ರ ಬರ್ತಾರೆ, ಪೂಜೆ ಮಾಡ್ತಾರೆ, ಆರತಿ ಬೆಳಗ್ತಾರೆ, ಹಣ್ಣು ಕಾಯಿ ಇಡ್ತಾರೆ.. ನಿಂಗೆ lime light ಬೇಕು lime light!!... stardom stardom!!.. ನಿನಗೂ ನಮ್ ಪುಡಾರಿಗಳ್ಗೂ ವ್ಯತ್ಯಾಸಾನೇ ಇಲ್ಲ. ನಿನಗಿಂತ ನಮ್ ಎಷ್ಟೋ ಜನ scientists ಗಳೇ ವಾಸಿ.. ಗಜಮುಖ!! ಗಜಮುಖ!!.. ವೀರಪ್ಪನ್ ಸಾವಿರ ಆನೆಗಳ್ನಾ ಸಾಯಿಸ್ತಾ ಏನ್ ಮಾಡ್ದೆ ನೀನು ?.. ಆರಾಮವಾಗಿ ಅವ್ನು ಓಡಾಡ್ಕೊಂಡು ಇದಾನೆ, ನಾಳೆ ಮಂತ್ರಿನೂ ಆಗ್ತಾನೆ.. ವರ್ಷಕ್ಕೆ ಎರಡು ದಿನ ಬರ್ತಿಯಾ ಆರ್ಕೆಸ್ಟ್ರಾ ಹಾಕ್ಕೊಂಡು, ಡೆಕೊರೆಶನ್ ಮಾಡ್ಕೊಂಡು ಡಾನ್ಸ್ ಮಾಡಿ ಹೋಗ್ತಿಯಾ. ನಾನೇ ವಾಸಿ ೪ ಜನ ಕೆಟ್ಟೋರ್ನಾ ಮೇಲಕ್ಕೆ ಕಳ್ಸಿ ಬಂದಿದೀನಿ ಗೊತ್ತಾ. ನೀನಿಲ್ಲಿ ಇರೋದು ಸರಿ ಅಲ್ಲ, ನಿನ್ ಕೆಲ್ಸ ನೀನ್ ಕರಕ್ಟಾಗಿ ಮಾಡ್ತಾ ಇಲ್ಲ. ನೀನಿಲ್ಲಿ ಇರಬಾರ್ದು (ಎಂದು ಗಣೇಶನ ಮೂರ್ತಿಯನ್ನ ಬಾವಿಗೆ ಹಾಕುವ ಸಂದರ್ಭ)'.

ಚಿತ್ರ ಉಪೇಂದ್ರ :

'೧). ಕಷ್ಟ ಕಷ್ಟ.. ನೀನ್ ಪಡ್ತಿಯ ಕಷ್ಟ... ಕಷ್ಟ ಪಡೋನು ರೈತ.. ರೈತ ಕಷ್ಟಪಟ್ಟು ತಂದು ಅಂಗಡಿಗೆ ಹಾಕ್ತಾನೆ. ಜನಗಳು ಕಷ್ಟಪಟ್ಟು ಅದನ್ನ ತಗೊಂಡ್ ಹೋಗ್ತಾರೆ. ನೀನೇನ್ ಮಧ್ಯದಲ್ಲಿ ಕೂತ್ಕೊಂಡ್ ಅಲ್ಲಾಡ್ಸೋದು?.. ಕಷ್ಟಪಡ್ತನಂತೆ ಕಷ್ಟ..!! ನಿಮ್ಮಪ್ಪ ಮಾಡಿರೋ ಅಂಗಡಿ, ಆಸ್ತಿಲಿ ಕೂತ್ಕೊಂಡ್ ಆರಾಮವಾಗಿ ಇದಿಯಾ.. ಈ ನಿನ್ ದಾಂಡಿಗ ಮಗ ಕೂತ್ಕೊಂಡ್ ತಿಂತಾನೆ. ನೋಡು ನಮ್ ದೇಶಕ್ಕೆ ಬೇಕಾಗಿರೋದು ಇಂತ ದಾಂಡಿಗ ನನ್ ಮಗ ಅಲ್ಲ.. ವಿಶ್ವೇಶ್ವರಯ್ಯ..!! ಬೀದಿ ದೀಪದ ಕೆಳ್ಗೆ ಓದುದ್ರಲ್ಲ ಅಂತ ವಿಶ್ವೇಶ್ವರಯ್ಯ..!! first of all ನನ್ ಮಗಂದು ಅಪ್ಪನ ದುಡ್ಡು ಮಗ ತಿನ್ನೋದೇ ದೊಡ್ಡ ತಪ್ಪು. ನಾನೇನಾದ್ರೂ PM ಆದ್ರೆ ಅಪ್ಪನ ಆಸ್ತಿ ಮಗನಿಗೆ ಹೋಗೋದನ್ನ BAN ಮಾಡ್ತಿನಿ. ಆ ತರಹ ಮಾಡದ್ರೆ ನಿಮ್ಮಂತಹ ನನ್ ಮಕ್ಳು 4,4 ತಲೆಮಾರಿಗೆ ಆಗೋಷ್ಟು ಆಸ್ತಿ ಮಾಡಲ್ಲ.. ಎಲ್ಲ EQUAL ಆಗಿ ಇರ್ತಾರೆ..'
೨). ಓ ಆ ಥರಾ ಲವ್ ಮಾಡ್ಬೇಕಾ..? ಅದು ಲವ್ ಅಲ್ಲ ಅದು TT..!! ನೀನ್ ಲವ್ ಮಾಡ್ತಿಯಾ ಅನ್ನೋ ಬದ್ಲು TT ಮಾಡ್ತಿಯಾ ಅಂತ ಕೇಳಿದ್ರೆ ರೆಡಿ ಅಂತಿದ್ದೆ ನಾನು. ನೋಡು ಆ ನನ್ ಮಕ್ಳಿಗೆ ಲವ್ ಅಂದ್ರೆ ಏನ್ ಗೊತ್ತು.? ಹಾಗೆ ತಬ್ಕೊಂಡ್ ಹೊರಳಾಡ್ತಾ ಇದಾರೆ, ಕಚಡ ನನ್ ಮಕ್ಳು... ಯೌವ್ವನದ ಕಟ್ಟೆ ಹೊಡಿತಿದ್ದ ಹಾಗೆ, ಆರಡಿ ಮೂರಡಿ ಜಾಗ ಸಿಕ್ಕದ್ರೆ ಸಾಕು ಎಲ್ಲೆಂದ್ರಲ್ಲಿ ಲವ್ ಮಾಡ್ತಾರೆ. ಪಾರ್ಕಲ್ಲಿ ಮಾನ ಮರ್ಯಾದೆ ಬಿಟ್ಟು ಲವ್ ಮಾಡ್ತಾರೆ, ಮಾರುತಿ 800 ಲ್ಲಿ ಕಷ್ಟ ಪಟ್ಕೊಂಡ್ ಲವ್  ಮಾಡ್ತಾರೆ ನನ್ ಮಕ್ಳು.. ಲವ್ ಅಂತೆ ಲವ್ ಥೂ.. ಅದಕ್ಕೆ ಪವಿತ್ರವಾದ ಲವ್ ಅನ್ನೋ ಹೆಸರು ಬೇರೆ ಇಟ್ಕೊಂಡ್ ಓಡಾಡ್ತಾರೆ. ಅದೆಲ್ಲ ಲವ್ವೇ ಅಲ್ಲ. ನಾನ್ ನಿಂಜೊತೆ ಮಾಡ್ತಿರೋ ಲವ್ english ಲವ್ ಅಲ್ಲ ತಿಳ್ಕೋ. ಅಚ್ಚ ಕನ್ನಡದ ಪ್ರೀತಿ, ಪ್ರೇಮ, ಒಲವು.. ಒಲವೆ ಜೀವನ ಸಾಕ್ಷಾತ್ಕಾರ. ನೋಡುಲವ್ ಅನ್ನೋದು ಎದೆ ಮೇಲಿದ್ರೆ ಪ್ರೀತಿ, ಅದರಿಂದ ಕೆಳಗಿದ್ರೆ 
ಅದು...'

ಚಿತ್ರ ರಕ್ತಕಣ್ಣೀರು :

ಆ ಧರ್ಮ... ಧರ್ಮ ಅಲ್ಲ ನೀವು ಮಾಡಿರೊಂತ ಕರ್ಮ. ಇಡೀ ದೇಶದಲ್ಲಿರೊಂತ ಪ್ರತಿಯೊಂದು ಹೆಣ್ಣು ಮಾಡಿರೊಂತ  ಕರ್ಮ. ಹೆಣ್ಣು ಗಂಡಿಗಿಂತ ದೈಹಿಕವಾಗಿ ಬಿಟ್ರೆ ಮಾನಸಿಕವಾಗಿ, ಬೌದ್ದಿಕವಾಗಿ, ಭಾವನಾತ್ಮಕವಾಗಿ ಕೆಲಸ ಮಾಡೋದ್ರಿಂದ ಹಿಡಿದು ಮೈಥುನ ಕ್ರಿಯೆವರೆಗೂ ಎಲ್ಲದರಲ್ಲೂ ಅವಳು ಮುಂದೆ ಇದಾಳೆ. ಆ ಭಯ ಗಂಡಿಗೆ ಇರೋದ್ರಿಂದಾನೆ ಅವಳನ್ನ ಸಂಸ್ಕೃತಿ, ಆಚಾರ, ವಿಚಾರ ಅನ್ನೋ ಮನೇಲಿ ಬಂಧಿಸಿ ಅವನು ಹೊರಗಡೆ ಜಾಲಿ ಆಗಿ ಇರೋದಕ್ಕೆ ಶುರು ಮಾಡ್ದ. sentimental fools ಆಗಿರೋ ನಿಮ್ಮನ್ನ exploit ಮಾಡಿ enjoy ಮಾಡೋಕೆ ಶುರು ಮಾಡ್ದ. ಗಂಡು ಮಾಡಿದರೆ ರಸಿಕತನ ಹೆಣ್ಣು ಮಾಡಿದರೆ ಹಾದರ ಅನ್ನೋದನ್ನ ನೀವೇ ಒಪ್ಕೋತಾ ಹೋದ್ರಿ. ಆಳೋ ಕೆಲ್ಸನ ಗಂಡಿಗೆ ಕೊಟ್ಟು ಅಳೋ ಕೆಲ್ಸನ ನೀವ್ ಇಟ್ಕೊಂಡ್ರಿ. ಜೀವನದ ಗಾಡಿ ಸರಾಗವಾಗಿ ಓಡೋದಕ್ಕೆ ಒಬ್ಬ life partner ಬೇಕು. ಅದನ್ನ ಮರೆತು ಅಪ್ಪ ಹಾಕಿರೋ ಆಲದಮರ ಅಂತ ಅಳ್ತಾ ಅಳ್ತಾ ಕಣ್ಣೀರಿಡ್ತಾ ಕೂರಬಾರದು. ಶೀಲ, ತಾಳಿ, ಸಪ್ತಪದಿ ಅನ್ನೋದು ಬರೀ ಹೆಣ್ಣಿಗೆ ಸಂಬಂಧಪಟ್ಟದ್ದಲ್ಲ, ಅದು ಗಂಡಿಗೆ ಕೂಡ ಅನ್ವಯಿಸತ್ತೆ ಅನ್ನೋದನ್ನ ಈ ಸಮಾಜಕ್ಕೆ ಸಾರಿ ಹೇಳೋಣ. ಕೆರೆ, ಬಾವಿ, ಕೇವಲ ಮೂರಡಿ ಹಗ್ಗದಲ್ಲಿ ತಮ್ಮ ಆತ್ಮನ ಕಳ್ಕೊಳೋ ರಕ್ತಕಣ್ಣೀರಿನ ಕಥೆ ಇವತ್ತಿಗೆ ಕೊನೆಯಾಗಲಿ. ರಕ್ತಕಣ್ಣೀರಿನ ದುರಂತದ ಕಥೆ ಇವತ್ತಿಗೆ ನಿರ್ನಾಮವಾಗಲಿ. ಇನ್ಮೇಲಾದ್ರು ಮುಗ್ದ ಅಬಲೆಯರ ಬಾಳು ಸುಖಮಯವಾಗಿರಲಿ.

ಚಿತ್ರ  ಓಂ :

ಈ open world ನಲ್ಲಿ ಕೆಟ್ಟ ಮನಸ್ಸು, ಮೋಸ,  ಸ್ವಾರ್ಥಗಳಿಂದ ಮನುಷ್ಯರು ಹೊಡೆದಾಡ್ತಾರೆ. ಅದೇ underworld ನಲ್ಲಿ ಮಚ್ಚು ಕತ್ತಿಗಳಿಂದ ಹೊಡೆದಾಡ್ತಾರೆ. ಆ  ಮಾನಸಿಕ ಯುದ್ದಕ್ಕಿಂತ ಈ ದೈಹಿಕ ಯುದ್ದಾನೆ ಮೇಲು.


-----------------------------------------------------------------------------------------------------------

ಮೇಲಿನ ಸಂಭಾಷಣೆಗಳನ್ನ ಸೂಕ್ಷ್ಮವಾಗಿ ಗಮನಿಸಿದರೆ ಉಪೇಂದ್ರರಲ್ಲಿ ಇರುವಂತಹ ಸಾಮಾಜಿಕ ಕಳಕಳಿ ತಿಳಿಯುತ್ತದೆ. ಸಮಾಜದಲ್ಲಿ ಇಂದು ಬೃಹದಾಕಾರವಾಗಿ ಬೆಳೆದಿರುವಂತಹ ಸಾಮಾಜಿಕ ಅಸಮಾನತೆ, ಅನ್ಯಾಯ ಅಕ್ರಮಗಳು, ಸಂಪ್ರದಾಯ ಸಂಸ್ಕೃತಿ ಸಂಸ್ಕಾರಗಳನ್ನ ಗಾಳಿಗೆ ತೂರಿ ಸ್ವೇಚ್ಚಾಚಾರಿಗಳಾಗಿ ಬದುಕುತ್ತಿರುವುದು, ಜೀವನ ಅಂದರೇನೆ ಮಜಾ ಮಾಡೋದು, ಶೋಕಿ ಮಾಡೋದು, ನಾನು ನಂದು ಅನ್ನೋ ಸ್ವಾರ್ಥದಿಂದ ಬಾಳೋದು ಅಲ್ಲ ಎಂಬುದನ್ನ ಅವರದೇ ಆದ ಶೈಲಿಯಲ್ಲಿ ಭಿನ್ನವಾಗಿ ಚಿತ್ರಿಸುವುದನ್ನ ಇವರ ಸಿನಿಮಾಗಳಲ್ಲಿ ಮಾತ್ರವೇ ನೋಡಲು ಸಾಧ್ಯ.

ಯಾವುದೇ ವ್ಯಕ್ತಿ ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡಾಗ ಬಹಳ ಜವಾಬ್ದಾರಿಯುತವಾಗಿ ನಡೆಯಬೇಕಾಗುತ್ತದೆ. ಸಾಮಾಜಿಕ ಜವಾಬ್ದಾರಿ ಹೊರಬೇಕಾಗುತ್ತದೆ. ಏಕೆಂದರೆ ಅಂತಹವರನ್ನ ಅನುಸರಿಸುವವರು ಸಾಕಷ್ಟು ಇರುತ್ತಾರೆ. ಮೌಲ್ಯಗಳಿಗೆ ಬೆಲೆ ಕೊಡುವವನು ಮಾತ್ರ ಸಾಮಾಜಿಕ ಜವಾಬ್ದಾರಿ ಹೊರಲು ಸಾಧ್ಯ, ಸಾಮಾಜಿಕ ಕಳಕಳಿ ಹೊಂದಿರಲು ಸಾಧ್ಯ. ನೀವು ಸೂಕ್ಷ್ಮವಾಗಿ ಗಮನಿಸಿ ನೋಡಿ ಉಪೇಂದ್ರರ ಚಿತ್ರಗಳಲ್ಲಿ ಅದು ಬಿಂಬಿತವಾಗಿರುತ್ತದೆ. ಈ ಗೊಡ್ಡು ಹಿಡಿದ ಅನ್ಯಾಯಭರಿತ ಸಮಾಜದ ವಿರುದ್ದ ಒಂದು ಏರು ಧ್ವನಿ ಅವರ ಚಿತ್ರದಲ್ಲಿರುತ್ತದೆ.
ಉದಾಹರಣೆಗೆ..
H2O : ಉಪೇಂದ್ರರ ಜಾಣ್ಮೆಗೆ ಇದೊಂದು ಚಿತ್ರ ಸಾಕು. ಪಾತ್ರಗಳ ಸೃಷ್ಟಿಯಂತೂ ಅದ್ಭುತ. ಕರ್ನಾಟಕ ಹಾಗೂ ತಮಿಳುನಾಡಿನ ಮನಸುಗಳ ನಡುವೆ ಆಗ್ಗಾಗ್ಗೆ ಉದ್ಭವಿಸುವ ರಾಜಕೀಯ ಪ್ರೇರಿತ ಜಗಳ, ದ್ವೇಷಗಳು ಕೇವಲ ನನ್ನದು ನನ್ನದು ಎಂಬ ಸ್ವಾರ್ಥಪರ ಮನಸ್ಥಿತಿಯಿಂದ. ಈ ಮನಸ್ಥಿತಿಗೆ ಚಿತ್ರಾಂತ್ಯದಲ್ಲಿ ಬರುವ ಒಂದು ದೇಹ ಎರಡು ತಲೆ ಹೊಂದಿರುವ ಪಾತ್ರ ತಕ್ಕ ಉತ್ತರ ಕೊಡುತ್ತದೆ. ಒಂದು ಜೀವಕ್ಕೆ ಬದುಕಬೇಕೆಂಬ ಆಸೆ, ಮತ್ತೊಂದಕ್ಕೆ ಸಾಯುವ ಹಂಬಲ. ಒಬ್ಬರು ಬದುಕಬೇಕೆಂದರೆ ಇಬ್ಬರೂ ಬದುಕಬೇಕು. ಒಬ್ಬರು ಸಾಯಬೇಕೆಂದರೆ ಮತ್ತೊಬ್ಬರೂ ಸಾಯಬೇಕು. ಯಾವ ರೀತಿ ಇವರ ಸಮಸ್ಯೆಗೆ ಉತ್ತರ ಇಲ್ಲವೋ, ಅದೇ ರೀತಿ ಕಾವೇರಿ ನದಿಯ  ಸಮಸ್ಯೆಗೆ ಉತ್ತರ ಇಲ್ಲ. ಅದು ಯಾರ ಸ್ವತ್ತೋ ಅಲ್ಲ ಪ್ರಕೃತಿಯ ಸ್ವತ್ತು. supreme court ಕೂಡ ಕೊಡಲಾಗದ ತೀರ್ಪನ್ನು ಉಪೇಂದ್ರ ಕೊಟ್ಟಿದ್ದಾರೆ.

ಸೂಪರ್ : ಅವರ ಇತ್ತೀಚಿನ ಚಿತ್ರ ಸೂಪರ್ ಬಹು ದೊಡ್ಡ ಸಂದೇಶವನ್ನ ಸಾರುವ ಚಿತ್ರ. ಈ ಜಗತ್ತೆಲ್ಲಾ ನಮ್ಮದು, ಜಗತ್ತಿನಲ್ಲಿರುವವರೆಲ್ಲಾ ನಮ್ಮವರು, ಒಬ್ಬರನ್ನೊಬ್ಬರು ಪ್ರೀತಿ, ಸ್ನೇಹ, ಆದರಗಳಿಂದ ಕಾಣಬೇಕು ಕೂಡಿಬಾಳಬೇಕು. ಅದರಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಸಾಧ್ಯ, ಮನುಕುಲದ ಅಭಿವೃದ್ದಿ ಸಾಧ್ಯ ಎಂಬ ದಿಟ್ಟ ಸಂದೇಶ ರವಾನಿಸಿದ್ದಾರೆ. ಈ ಚಿತ್ರದಲ್ಲಿ ಸರಿಯಾಗಿ ಗಮನಿಸಿ ನೋಡಿ ದೇಶ ವೈಜ್ಞಾನಿಕವಾಗಿ ಬಹು ದೊಡ್ಡದಾಗಿ ಬೆಳೆದಿರುತ್ತದೆ. ಆದರೆ ಜನರ ಉಡುಪು, ಭಾಷೆ, ಭಾವನೆಗಳಲ್ಲಿ ಯಾವುದೇ ಬದಲಾವಣೆಗಳಾಗಿರುವುದಿಲ್ಲ. ಅದರರ್ಥ, ನಾವು ಎಷ್ಟೇ ಮುಂದುವರೆದರೂ ಸ್ವಂತಿಕೆಯನ್ನ ಕಳೆದುಕೊಳ್ಳಬಾರದು. ನಮ್ಮ ಆಚಾರ, ವಿಚಾರ, ಸಂಸ್ಕೃತಿ, ಸಂಪ್ರದಾಯಗಳನ್ನ ಗಾಳಿಗೆ ತೂರಿ ಬದುಕಬಾರದು. ಹುಡುಕುತ್ತಾ ಹೋದರೆ ಈ ರೀತಿಯಾದ ಸಾಕಷ್ಟು ಸಂದೇಶಗಳು ಸಿಗುತ್ತವೆ.

ನನ್ನ ಜೀವನದಲ್ಲಿ ನಡೆದ ಕೆಲವು ಘಟನೆಗಳು :
೧). ಅದು ನಾನು PUC ಓದುತ್ತಿದ್ದ ದಿನಗಳು. ರಕ್ತಕಣ್ಣೀರು ಚಿತ್ರ ಬಿಡುಗಡೆಯಾಗಿ ಒಂದು ವಾರ ಆಗಿತ್ತು. ನಮ್ಮ ಇಂಗ್ಲೀಷ್ lecturer class ತಗೊಂಡಿದ್ರು. ಸ್ವಲ್ಪ ಸಮಯದ ನಂತರ ಅವರು ರಕ್ತಕಣ್ಣೀರು ಸಿನೆಮಾ ಎಷ್ಟು ಜನ ನೋಡಿದಿರಾ ಕೈ ಎತ್ತಿ ಎಂದರು. ೮-೯ ಜನ ಕೈ ಎತ್ತಿದ್ದು ನೋಡಿ ಬಹಳ ಕೋಪಗೊಂಡ lecturer ಉಳಿದವರನ್ನೆಲ್ಲ ಬೈದರು. ಒಂದು ಅರ್ಥಗರ್ಭಿತ ಚಿತ್ರ theatre ಗೆ ಬಂದಾಗ ನೋಡುವ ಅವಕಾಶ ಕಳ್ಕೋಬಾರದು ಅಂತ ಕಿವಿಮಾತು ಹೇಳಿದ್ದರು.
೨). ಅದು ನಾನು SIT ಯಲ್ಲಿ BE ಓದುತ್ತಿದ್ದ ಸಂದರ್ಭ. Personality development program ನಡೆಯುತ್ತಿದ್ದ ವೇಳೆ. ನಾನೂ ಪಾಲ್ಗೊಂಡಿದ್ದೆ. Trainer question ಹೀಗಿತ್ತು. Name one of the legendary personalities of karnataka?. ಎಲ್ಲರೂ ಕರ್ನಾಟಕದ Big personality ಹೆಸರುಗಳನ್ನ ಹೇಳಿದರು. ಮರುಕ್ಷಣ ಅವರ ಪ್ರಶ್ನೆ why not upendra?, why do you people dont look at good things?, why dont you call him one of the legendary personalities of karnaataka ?.. ಆಗ ನಾನೊಬ್ಬ ಮೂಕ ಪ್ರೇಕ್ಷಕನಾಗಿದ್ದೆ.
ಅಷ್ಟೇ ಏಕೆ 'ಸೂಪರ್' ಚಿತ್ರ ನೋಡಿದ ಸೂಪರ್ ಸ್ಟಾರ್ ರಜನಿಕಾಂತ್ ಹೇಳಿದ್ದೇನು ಗೊತ್ತಾ..? Upendra is one of the great directors in Indian cinema..

ಉಪೇಂದ್ರ ರೀತಿಯೇ ಸಾಮಾಜಿಕ ಕಳಕಳಿ ಇರುವ, ಸಿನೆಮಾ ಎಂಬುದು ಕಲೆ ಮಾತ್ರ, ವ್ಯಾಪಾರ ಅಲ್ಲ ಎಂದು ತಿಳಿದಿರುವ ಸಾಕಷ್ಟು ನಿರ್ದೇಶಕರು ನಮ್ಮ ಭಾರತ ಚಿತ್ರರಂಗದಲ್ಲಿ ಕಲಾ ಸೇವೆ ಮಾಡುತ್ತಿದ್ದಾರೆ. ಉದಾಹರಣೆಗೆ ಕನ್ನಡದಲ್ಲಿ ಶಂಕರನಾಗ್(ನಮ್ಮನ್ನ ಅಗಲಿದ್ದರೂ ಅಮರರಾಗಿರುವ ಮಹಾನ್ ಪ್ರತಿಭೆ), ರಾಜೇಂದ್ರಸಿಂಗ್ ಬಾಬು, ಸುನೀಲಕುಮಾರ್ ದೇಸಾಯಿ, ಗುರುಪ್ರಸಾದ್, ತೆಲುಗಿನಲ್ಲಿ ಶೇಖರ್ ಕಮ್ಮುಲ, ಪೂರಿ ಜಗನ್ನಾಥ್, ತಮಿಳಿನಲ್ಲಿ ಶಂಕರ್, ಮಣಿರತ್ನಂ, ವಿಜಯ್, ಗೌತಂ ವಾಸುದೇವ್ ಮೆನನ್, K S ರವಿಕುಮಾರ್, ಹಿಂದಿಯಲ್ಲಿ ರಾಜಕುಮಾರ್ ಸಂತೋಷಿ, ರಾಕೇಶ್ ಓಂ ಪ್ರಕಾಶ್ ಮೆಹ್ರಾ, ಪ್ರಕಾಶ್ ಜಾ, ಅಶುತೋಷ್ ಗೊವಾರಿಕರ್, ಅನುರಾಗ್ ಕಶ್ಯಪ್ ಹೀಗೆ ಹಲವರಿದ್ದಾರೆ. ಇವರೆಲ್ಲರ ಸಾಲಿಗೆ ಉಪೇಂದ್ರ ಸೇರುತ್ತಾರೆ ಎಂಬುದು ಅಪ್ಪಟ ಕನ್ನಡದವರಾದ ನಮಗೆ ಹೆಮ್ಮೆಯ ವಿಷಯ. ನಾವು ಗೌರವಿಸುವ ವೇದಗಳು, ಪೂಜಿಸುವ ಪವಿತ್ರ ಗ್ರಂಥಗಳಾದ ಮಹಾಭಾರತ, ರಾಮಾಯಣ, ಭಗವದ್ಗೀತೆಗಳಲ್ಲೂ ಇದೆ ಜೀವನದ ಮೌಲ್ಯಗಳನ್ನ ಹೇಳಲಾಗಿದೆ. ಆದರೆ ಮೌಲ್ಯಗಳನ್ನ ಹೇಳುವ, ತೋರಿಸುವ ಉಪೇಂದ್ರರ ರೀತಿ ವಿಭಿನ್ನವಾಗಿರುತ್ತದೆ ಅಷ್ಟೇ. ಯಾವುದೇ ಆಗಲಿ ನೋಡುಗರು ಯಾವ ರೀತಿ ಗ್ರಹಿಸುತ್ತಾರೆ ಎಂಬುದರ ಮೇಲೆ ಆಧಾರವಾಗಿರುತ್ತದೆ. ಈ ಲೇಖನವನ್ನ ಒಬ್ಬ ಮೂಢ ಅಭಿಮಾನಿ ಬರೆದಿದ್ದಾನೆ ಎಂದು ತಿಳಿಯಬೇಡಿ. ಏಕೆಂದರೆ ಇದುವರೆವಿಗೂ ನಾನು theatre ಗೆ ಹೋಗಿ ನೋಡಿರುವ ಉಪೇಂದ್ರರ ಚಿತ್ರ ಒಂದೇ ಅದು 'ಸೂಪರ್'.

ಉಪೇಂದ್ರ ಒಬ್ಬ ಸಾಹಿತಿಯಾಗಿ :
ಉಪೇಂದ್ರ ಬಹಳ sharp and sensitive ವ್ಯಕ್ತಿ. ಸಣ್ಣ ಸಣ್ಣ ವಿಷಯಗಳನ್ನ ಬಹಳ ಚೆನ್ನಾಗಿ ಗಣನೆಗೆ ತಗೋತಾರೆ. ಸಾಹಿತ್ಯ ಗೀಚುವುದರಲ್ಲಿ ಎತ್ತಿದ ಕೈ. ಒಂದು ಕಾಲದಲ್ಲಿ ಅತ್ತ್ಯುತ್ತಮ ಸಾಹಿತ್ಯ ರಚನೆಕಾರರು, ಸಂಗೀತ ನಿರ್ದೇಶಕರು, ನಿರ್ದೇಶಕರಿಂದ ತುಂಬಿ ತುಳುಕುತ್ತಿದ್ದ ಕನ್ನಡ ಚಿತ್ರರಂಗ ಇಂದು ಕೇವಲ ಎಡಬಿಡಂಗಿಗಳಿಂದ ತುಂಬಿ ಬಡವಾಗಿದೆ.
ಪ್ರ್ರೀತಿ ಬಗ್ಗೆ ನೀವು ಕೇಳಿದರೆ ಉಪೇಂದ್ರ ಪ್ರೀತಿಯನ್ನ ವರ್ಣಿಸುವ ರೀತಿಯೇ ಬೇರೆ. ನೀವು 'ಶ್' ಚಿತ್ರದ 'ಅವನಲ್ಲಿ ಇವಳಿಲ್ಲಿ' ಹಾಡು, hollywood ಚಿತ್ರದ 'ಪ್ರೇಮ ಪ್ರೇಮ ಪ್ರೇಮ' ಹಾಡು, ಸ್ವಸ್ತಿಕ್ ಚಿತ್ರದ 'ಮಿಂಚು ಹುಳ' ಹಾಡುಗಳು ಅವರ ಪ್ರತಿಭೆಗೆ ಸಾಕ್ಷಿ. ಅರ್ಥಗರ್ಭಿತ ಹಾಡುಗಳೆಂದರೆ ಉಪೇಂದ್ರ ಚಿತ್ರದ 'ಏನಿಲ್ಲ ಏನಿಲ್ಲ', ರಕ್ತಕಣ್ಣೀರು ಚಿತ್ರದ 'danger' ಕಾಡದೆ ಇರಲಾರವು. ಯಾವಾಗಲೂ ವಿಬಿನ್ನ ಸಾಹಿತ್ಯದಿಂದ ಎಲ್ಲರನ್ನೂ ಚಕಿತಗೊಳಿಸುವ ಕೌಶಲ್ಯ ಅವರಿಗೆ ಕರಗತವಾಗಿದೆ.

ಉಪೇಂದ್ರ ಒಬ್ಬ ರಾಜಕಾರಿಣಿಯಾಗಿ :

ನಮ್ಮ ಮನಸ್ಥಿತಿ ಹೇಗಾಗಿದೆ ಎಂದರೆ ಎಲ್ಲರನ್ನ, ಎಲ್ಲವನ್ನ ದೂಷಿಸುತ್ತಾ ಇರುತ್ತೇವೆ. ನಮ್ಮ ಜವಾಬ್ದಾರಿ, ಕರ್ತವ್ಯಗಳನ್ನ ಮರೆತು ಇತರರನ್ನ ಮಾತ್ರಾ ತರಾಟೆಗೆ ತಗೊಳೋದನ್ನ ಅಭ್ಯಾಸ ಮಾಡ್ಕೊಂದಿದ್ದಿವಿ. ಪ್ರತಿನಿತ್ಯ ಕಣ್ಣೆದುರೇ ಅನ್ಯಾಯ ನೆಡಿತಿದ್ರೂ ಅದನ್ನ ಪ್ರತಿಭಟಿಸೋ ಗೋಜಿಗೆ ನಾವು ಹೋಗೋಲ್ಲ, ಅಕ್ರಮ ಮಾಡುತ್ತಿರೋರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳೋದಿಲ್ಲ, ಸರ್ವಾದಿಕಾರಿ ತರ ಮೆರೆಯೋರಿಗೆ ಸಲಾಂ ಹೊಡಿಯೋರ ಸಾಲಿನಲ್ಲಿ ನಿಲ್ಲೋದು ಬಿಡೋದಿಲ್ಲ, ಅದು ಸರಿ ಇಲ್ಲ ಇದು ಸರಿ ಇಲ್ಲ ಅಂತ ಅನಕ್ಷರಸ್ತರನ್ನ ವಿಧಾನಸೌಧಕ್ಕೆ, ಪಾರ್ಲಿಮೆಂಟ್ಗೆ ಕಳಿಸೋದನ್ನ ಪಾಲಿಸದೆ ಇರೋಲ್ಲ. ಡಾಕ್ಟರ್, ಎಂಜಿನಿಯರ್, ಲಾಯರ್ ಅನ್ನೋ ಮಜಾ ಕೊಡು ಹುದ್ದೆಗಳಿಗೆ ಸೇರ್ಕೊತಿವೆ ಹೊರತು ರಾಜಕೀಯಕ್ಕೆ ಸತ್ತರೂ ಬರೋದಿಲ್ಲ.

ಆದರೆ...

ಸಾರ್ವಜನಿಕ ಜೀವನದಲ್ಲಿ ಗುರುತಿಸಿಕೊಂಡು ದೇಶದ ಅಭಿವೃದ್ದಿಯಲ್ಲಿ ಪಾಲ್ಗೊಳ್ಳಬೇಕೆಂಬ ಹಂಬಲದಿಂದ ರಾಜಕೀಯ ಪ್ರವೇಶ ಮಾಡಿದ ಅನೇಕ ಮಹಾನುಭಾವರಿದ್ದಾರೆ. ಇವರಂತೆಯೇ ಉಪೇಂದ್ರ ಒಂದು ಒಳ್ಳೆ plan, strategy ಗಳೊಂದಿಗೆ ರಾಜಕೀಯ ಪ್ರವೇಶ ಮಾಡಲು ಸನ್ನದ್ಧರಾಗಿದ್ದಾರೆ. ಈತ ರಾಜಕೀಯಕ್ಕೆ ಬಂದ್ರೆ ಏನೂ ಮಾಡೋದಕ್ಕೆ ಸಾಧ್ಯ ಇಲ್ಲ ಅನ್ನೋ ಉಡಾಫೆ ವರ್ತನೆಯನ್ನ ಬಿಟ್ಟು, ರಾಜಕೀಯ ಸರಿ ಇಲ್ಲ, ರಾಜಕಾರಿಣಿಗಳು ಸರಿ ಇಲ್ಲ, ಈ ದೇಶ ಉದ್ಧಾರ ಆಗೋಲ್ಲ ಅನ್ನೋ ಕಟಿಣ ಧೋರಣೆ ತಳೆದಿರುವಂತಹ ಜನರೆಲ್ಲಾ ಮೈ ಕೈ ಕೊಡವಿಕೊಂಡು ಎದ್ದು ಇಂತಹವರ ಬೆಂಬಲಕ್ಕೆ ನಿಲ್ಲಬೇಕಾಗಿದೆ.

ಸರ್ವರ ಬೆಂಬಲ ಉಪೇಂದ್ರರಿಗೆ ಸಿಗಲೆಂಬ ಆಶಯದಿಂದ ಈ ಲೇಖನವನ್ನ ಮುಗಿಸುತ್ತಿದ್ದೇನೆ.

ಬುಧವಾರ, ಆಗಸ್ಟ್ 3, 2011

ಸಾಕಾಗಿದೆ ಗೆಳತಿ

ನಮ್ಮ ಮಾತುಗಳು ಬೆರೆತುಹೋದರೆ
ಮೂಡಿರುವ ಕುತೂಹಲ ಕಡಿಮೆಯಾಗಬಹುದು
ಮೌನದ ಮಜಾ ಮರೆಯಾಗಬಹುದು
ಅವಿತಿರುವ ಭಾವನೆಗಳಿಗೆ ಅರ್ಥ ಬಂದುಬಿಡಬಹುದು
ಆದರೆ,
ಈ ಮೌನ ಸಂಭಾಷಣೆ ಸಾಕಾಗಿದೆ ಗೆಳತಿ
 
ಪರಸ್ಪರ ಪ್ರೀತಿಸುವ ಹೃದಯಗಳು
ಭಾರವಾಗಬಹುದು
ಮರಿ ಹಕ್ಕಿಗೆ ಬಲಿತ ಪುಕ್ಕ ಕೊಟ್ಟ
ಖುಷಿಯ ಅನುಭವವಾಗಬಹುದು
ಕಾಯುವಿಕೆಯಲ್ಲಿರುವ ಸುಖ
ಕಡಿಮೆಯಾಗಬಹುದು
ಆದರೆ,
ಈ ಮೂಕ ಸಂವೇದನೆ ಸಾಕಾಗಿದೆ ಗೆಳತಿ

ಹೊಸ ಸವಾಲುಗಳು
ಸಿಡಿಲಿನಂತೆ ಎರಗಬಹುದು
ಆಪ್ತರ ಆಪದ್ಭಾಂದವರ
ಆಸರೆ ಸಿಗದೇ ಹೋಗಬಹುದು
ಜೊತೆ ಬೆರೆತು ಆನಂದಿಸುವ
ಸ್ವರ್ಗದ ಅನುಭವ ಸುಸ್ತಾಗಿಸಿಬಿಡಬಹುದು
ಆದರೆ,
ಸಹಿಸಲಾಗದ ವೇದನೆ ಸಾಕಾಗಿದೆ ಗೆಳತಿ


 

ಮಂಗಳವಾರ, ಜುಲೈ 26, 2011

ಒಂದು ಪುಟ್ಟ ಕವನ ಸಂಕಲನ

ನನ್ನ PUC ಹಾಗೂ BE ದಿನಗಳಲ್ಲಿ ನಾನಾಗೇ ಬರೆದ, ಕೆಲವರು ಮತ್ತೆ ಕೆಲವು ಸಂದರ್ಭಗಳು ಬರೆಸಿದ ಕವನಗಳನ್ನ ಇಲ್ಲಿ ಬರೆದಿದ್ದೇನೆ. silly ಎಂದೆನಿಸುವ ಕವನಗಳನ್ನ ಬರೆದು ಓದುಗರಿಗೆ ಹೊರೆ ಮಾಡಬಾರದೆಂದು ಕೆಲವನ್ನ ಮಾತ್ರ ಇಲ್ಲಿ ಬರೆದಿದ್ದೇನೆ. ಇಷ್ಟವಾದ್ರೆ ಒಂದು comment ಹಾಕಿ ಇಲ್ಲವಾದರೆ ಕತ್ತನ್ನ ಮೇಲೆತ್ತಿ ಉಗಿಯಿರಿ.. :)

ಕವನ ೧ : ಬರಬೇಕು ನೀ ಬರಬೇಕು

ಕತ್ತಲೆಯ ಮೋಡಗಳು ಕಂಗಳಿಗೆ ಕಂಡಾಗ
ಹೃದಯದ ನೋವುಗಳು ಮನೆ ಮಾಡಿ ಮೆರೆದಾಗ
ಪ್ರೀತಿಸುವ ಕೈಗಳು ಸಂಶಯದಿ ಸರಿದಾಗ
ಬರಬೇಕು ನನ್ನೊಡನೆ ನೀನಿರಬೇಕು

ಒಲವಿನ ಆಸೆಗಳು ಓರೆಯಾಗಿ ಹೋದಾಗ
ಚೆಲುವಿನ ನೆನಪುಗಳು ಘಾಡವಾದಾಗ
ನನ್ನೆಲ್ಲ ದಿನಗಳು ನಿನಗಾಗಿ ಕಾದಿರುವಾಗ
ಬರಬೇಕು ಪ್ರೀತಿ ಒಲುಮೆ ಹರಿಸಬೇಕು

ನಿನ್ನಯ ಸಂಗಡಕೆ ಕಾಯುತ್ತಾ ಕರೆದಾಗ
ರಹಸ್ಯಗಳ ಆಗರದಿ ನಾ ಬದುಕಿರುವಾಗ
ನೈಜ ಹಾದಿಗಳ ನಾ ಮರೆತಿರುವಾಗ
ಬರಬೇಕು ಕೈಹಿಡಿದು ನಡೆಸಬೇಕು

ಕವನ ೨ : ಹೀಗೇಕೆ

ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಬೆಳದಿಂಗಳ ಬೆಳಕೇಕೆ ?
ಸವಿಯುವ ಮನಸಿಲ್ಲದಿದ್ದರೆ !!
ಗುಂಪಿನ ಜೊತೆಗಾರರೇಕೆ ?
ಭಾವನೆಗಳೇ ಇಲ್ಲದಿದ್ದರೆ !!
ಚೆಲುವೆಯ ಚೆಲುವೇಕೆ ?
ರಸಿಕನಲ್ಲದಿದ್ದರೆ !!

ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಸಾಮರಸ್ಯದ ಜೀವನ ನಡೆಸದಿದ್ದರೆ !!

ಶಿಖರದೆತ್ತರದ ಗುರಿ ಏಕೆ ?
ಗುರಿಕಾರನಲ್ಲದಿದ್ದರೆ !!
ಸಾಧನೆಗಳತ್ತ ಗಮನ ಬರುವುದು ಹೇಗೆ ?
ಸಾಧಿಸುವ ಮನಸಿಲ್ಲದಿದ್ದರೆ !!
ಆಶಾಭಾವನೆ ಮೂಡುವುದು ಹೇಗೆ ?
ಮನದಲ್ಲಿ ಪ್ರೀತಿ ಇಲ್ಲದಿದ್ದರೆ !!

ಅಂತಸ್ತು ಐಶ್ವರ್ಯಗಳೇಕೆ ?
ನೆಮ್ಮದಿಯೊಂದು ಇಲ್ಲದಿದ್ದರೆ !!
ಸ್ನೇಹ ಆದರಗಳು ಅರ್ಥವಾಗದಿದ್ದರೆ !!

ಕವನ ೩ : ನೆನಪಿರಲಿ

ಎಂಜಿನಿಯರಿಂಗ್ ನ ಮೊದಲ ವರ್ಷ ಮುಗಿಸಿದ ಸಂಭ್ರಮದಲ್ಲಿ ಒಂದು ಸಣ್ಣ ಕಾರ್ಯಕ್ರಮ ನಡೆಸಲಾಗಿತ್ತು. ಊಟಕ್ಕಾಗಿ ಮನೆಗೆ ಬಂದ ನನಗೆ ಹೊಳೆದ ಕೆಲ ಪದಗಳನ್ನ ಪೋಣಿಸಿ ಅಂದು ಓದಿದ್ದೆ. ಮೊದಲಿಗೆ ನಾವು ಹೊಸತನ್ನ ಅನುಭವಿಸಿದಾಗ ಅದರಲ್ಲಿ ಸಿಗುವ ಆನಂದ ಅಮೋಘ. ಮೊದಲ ವರ್ಷದ BE ಅನುಭವಗಳೂ ಹಾಗೆ. ಓದುಗರಿಗೂ ತಂತಮ್ಮ ಮೊದಲ ವರುಷದ ನೆನಪುಗಳು ಮೂಡಬಹುದು ಎಂಬ ಭರವಸೆಯೊಂದಿಗೆ ಸಾಲುಗಳು..

ಕಳೆದುಹೋಯ್ತು ಎಂಜಿನಿಯರಿಂಗ್ ನ ಮೊದಲ ವರುಷ
ನೆಲೆ ನಿಂತಿದೆ ಎಲ್ಲರಲಿ ವರುಷದ ಹರುಷ
ಕಳೆದ ವರುಷದ ನೆನಪುಗಳೆಷ್ಟೋ, ನೋವುಗಳೆಷ್ಟೋ, ದುಖಗಳೆಷ್ಟೋ
ನೆನಪಿರಲಿ ಈ ವರುಷ ಎಲ್ಲರ ಜೊತೆ ಬೆರೆತ ಮೊದಲ ವರುಷ

ಕ್ಯಾಂಪಸ್ ನ thunder ಸ್ಪಾಟ್ಗಳು
ಕ್ಲಾಸ್ ರೂಂ ನ dayhot ತಮಾಷೆಗಳು
ಲೆಕ್ಚುರೆರ್ ಗಳ ಸಿಡುಕು ನೋಟಗಳು
auditorium ನ ಜೋರು ಜೋರು ಕೂಗುಗಳು
ಕಾಲೇಜಿನ colourful ಬೆಡಗಿಯರು
ನೆನಪಿರಲಿ ಈ ಹರುಷ ಎಲ್ಲರೂ ಖುಷಿಪಟ್ಟ ಮೊದಲ ವರುಷ

ಕ್ಯಾಂಟಿನಿನ queue ತಿಂಡಿಗಳು 
toilet ನಲ್ಲಿನ ನಗುಸುರಿಸೋ ಬರಹಗಳು
Reading hall ನ ಸುಂದರ ಸನ್ನಿವೇಶಗಳು
ಫಲಿತಾಂಶದ ಕಹಿ ಘಟನೆಗಳು
ನೆನಪಿರಲಿ ಈ ವರುಷ ನಮ್ಮೆಲರ ಸೇರಿಸಿದ ಮೊದಲ ವರುಷ !!

ಕವನ ೪ : ಮನಸ್ಸು

ಮನಸ್ಸಿನ ಕೆಲ ಆಯಾಮಗಳನ್ನ ಈ ಕವನದಲ್ಲಿ ಹೇಳಿದ್ದೇನೆ. ಹೀಗೆ ಬರೆಯುತ್ತಾ ಹೋದರೆ ಪುಟಗಳನ್ನೂ ಮೀರುವಷ್ಟು ಮನಸ್ಸಿನ್ನ ವಿವಿಧ ಆಯಾಮಗಳು ಕಣ್ಣೆದುರಿಗೆ ಬರುತ್ತವೆ..

ಮನಸೇ ಓ ಮೃಧುಲ ಮನಸೇ
ಕಾಣದಿರುವ ಸೊಗಸುಗಳನು ಇತ್ತ ಮನಸೇ
ಬಯಕೆಗಳನು ಬೆಳೆಸಿರುವ ಸ್ವಾರ್ಥ ಮನಸೇ
ಈಡೇರಿಸದೇ ಕಾಯಿಸುತಿರುವ ಕಳ್ಳ ಮನಸೇ

ಮನಸೇ ಓ ಕಠಿಣ ಮನಸೇ
ಬಗ್ಗದೆ ಬಳುಕದೆ ನಿಂತ ಮನಸೇ
ದೃಢತೆಯಲಿ ಶಿಖರ ಮುಟ್ಟಿದ ಮನಸೇ
ದಿಟ್ಟತೆಯಲಿ ದಡ ಸೇರಿಸದ ಮನಸೇ

ಮನಸೇ ಓ ನಿಜ ಮನಸೇ
ಸ್ನೇಹ ಪ್ರೀತಿಗಳ ಬಿತ್ತಿದ ಮನಸೇ
ಗುರಿ ಆಕಾಂಕ್ಷೆಗಳ ಬೆಳೆಸಿದ ಮನಸೇ
ಸಾಧನೆಗೆ ಸಿಡಿದೇಳಿಸಿದ ಸ್ಫೂರ್ತಿ ಮನಸೇ

ಮನಸೇ ಓ ಸುಳ್ಳು ಮನಸೇ
ಅಸೂಯೆ ಅಹಂಕಾರದ ಪ್ರತಿರೂಪ ಮನಸೇ
ಮೋಹ ಮತ್ಸರಕೆ ಬಗ್ಗುವ ಮನಸೇ
ಮರುಗಿಸಿ ಕೊರಗಿಸೋ ಪಿಶಾಚಿ ಮನಸೇ


ಕವನ ೫ : (ಶೀರ್ಷಿಕೆ ನೀವೇ ಇಡಿ)

ಸರಿಯುತಿದೆ ಸಂತಸದ ದಿನಗಳು
ಮುಸ್ಸಂಜೆಯ ಮಗ್ಗಲಿಗೆ
ಹರಿಯುತಿದೆ ಕತ್ತಲೆಯ ಕಾವು
ಬೆಳಕ ಕಂಡ ಕಂಗಳಿಗೆ

ನವ ಆಮಂತ್ರಣಕೆ ಸಜ್ಜಾಗುತಲಿದೆ
ಅಂಜಿಕೆ ಹೊತ್ತ ಮನವು
ಜಗದ ಭಾರವೇ ಹೊರಬೇಕೆನ್ನುವಂತೆ
ಅನಿಸುತಲಿದೆ ಮನಕೆ

ದೂರ ತೀರ ಯಾನ, ಸುಂದರ ತಾಣದ
ಆಸೆಯಿದೆ ಮೂಲೆಯಲಿ
ಕ್ರಮಿಸಬೇಕಾದ ದೂರ, ಕರಗತವಾದ ಪಾಠ
ಜೊತೆಯಲಿದೆ ನನ್ನಲ್ಲಿ

ಎತ್ತರವಾದ ಶಿಖರ, ಉದ್ದದ ನದಿ, ಆಳದ ಸಾಗರ
ನೀಡುತಲಿವೆ ಉತ್ಸಾಹ
ಬರಲಿ ಜಗವೆದುರಿಸುವ ಸವಾಲುಗಳು
ಎದುರಿಸೋಣ ಎಲ್ಲರೂ

ಕವನ ೬ : ತ್ಯಾಗಮಯಿ
ನನ್ನ ತಂದೆ ತನ್ನೆಲ್ಲ ಸುಖವನ್ನ ಮರೆತು ನಮ್ಮ ಅಭ್ಯುದಯದಲ್ಲೇ ಅವರ ಜೀವನ ಕಳೆದಿದ್ದನ್ನ  ನನ್ನ ಕಣ್ಣುಗಳಲ್ಲಿ  
ತುಂಬಿಕೊಂಡು  ನಾ ಬರೆದ ಕವನ, ಸ್ವಲ್ಪ sentiment ಇದೆ adjust ಮಾಡ್ಕೊಳ್ಳಿ..

ಹೇ ತ್ಯಾಗಮೂರ್ತಿಯೇ ನಿನಗೆ ನನ್ನ ನಮಸ್ಕಾರ
ಸಲ್ಲಿಸಬೇಕು ಎಲ್ಲರೂ ನಿನಗೆ ಮನತುಂಬಿದ ಪುರಸ್ಕಾರ
ದುಡಿಯುವೆ ನಮಗಾಗಿ ಈ ಸ್ವಾರ್ಥದ ಜಗತ್ತಿನಲ್ಲಿ
ಗಳಿಸಿರುವೆ ಉತ್ತಮ ಸ್ಥಾನ ನಮ್ಮ ಮನದಲ್ಲಿ

ಬೆಳೆದೆ ನೀ ತಂದೆ ತಾಯಿ ಹೆಮ್ಮೆಪಡುವ ಮಗನಾಗಿ
ಹಂಚಿದೆ ನಿನ್ನ ಸುಖವನ್ನ ಒಡಹುಟ್ಟಿದವರ ಉನ್ನತಿಗಾಗಿ
ಪ್ರೀತಿ ತುಂಬಿದ ಕಣ್ಣುಗಳಲ್ಲಿ ಕಂಡೆ ನಿನ್ನಾಕೆಯನ್ನ
ಅದಕ್ಕಾಗಿ ಕಷ್ಟಪಟ್ಟೆ ಪ್ರತಿದಿನ

ಮಕ್ಕಳಿಗಾಗಿ ಮೀಸಲಿಟ್ಟೆ ನಿನ್ನ ದುಡಿಮೆಯ ಫಲ
ಅವರ ಅಭ್ಯುದಯದಲ್ಲಿ ಬಿಡಲಿಲ್ಲ ನಿನ್ನ ಛಲ
ಸ್ವೀಕರಿಸುವೆಯಲ್ಲಾ ಕಷ್ಟಗಳನ್ನ ನಗುನಗುತ್ತಲೇ
ನೆನಪಿಸುವೆ ಅವುಗಳನ್ನ ಮುಗುಳ್ನಗುತ್ತಲೇ

ನಾ ಬೇಡುವೆ ನಿನ್ನ ಕಷ್ಟದಲ್ಲಿ ಸ್ವಲ್ಪ ಭಾಗ
ನನಗೂ ಬೇಕು ನಿನ್ನ ಹೃದಯದಲ್ಲಿ ಕೊಂಚ ಜಾಗ
ಸ್ನೇಹಿತನಾಗಿ ಬೆಳೆಸಿದೆ ನಮ್ಮನ್ನ
ಮರೆಯದಂತೆ ಮಾಡಿದೆ ನಿನ್ನ ಅಂತರಂಗವನ್ನ

ಉಳಿಸಿದೆ ನಿನ್ನೆಸರ ನಮ್ಮೆದೆಯ ಮಿಡಿತದಲ್ಲಿ
ಬರೆಸಿದೆ ನಮ್ಮ ಹಣೆ ಬರಹವನ್ನ ಸುಖದ ಹಾದಿಯಲ್ಲಿ
ಸ್ವಲ್ಪ ದೂರವಾದರೆ ಕಾಡುತ್ತದೆ ನಿನ್ನ ನೆನಪು
ಹತ್ತಿರವಿದ್ದರೆ ಬಡಿದೆಬ್ಬಿಸುತ್ತದೆ ಸಾಧನೆಯ ತುಣುಕು

ಕಣ್ಣಿನಿಂದಲೇ ತಿಳಿಸುವೆ ನಿನ್ನ ಅಂತರಂಗದ ನುಡಿ
ಮಾದರಿಯಾದೆ ಇತರರಿಗೆ ಅವರ ಮನಸ್ಸನ್ನ ಕಾಡಿ
ಹೇ ತ್ಯಾಗಮೂರ್ತಿಯೇ ನಿನಗೆ ನನ್ನ ನಮಸ್ಕಾರ
ಸಲ್ಲಿಸಲೇಬೇಕು ಎಲ್ಲರೂ ನಿನಗೆ ಮನತುಂಬಿದ ಪುರಸ್ಕಾರ

ಕವನ ೭ : ಭಾವುಕ  

ನಾನೊಬ್ಬ ಭಾವುಕ ಎಲ್ಲವನ್ನು ಸಹಿಸುವ ಸೇವಕ
ಕೆಲವೊಮ್ಮೆ ಮನಸ್ಸಿಗೆ ನೋವಾದಾಗಲೂ
ಸುಖದ ಹಾದಿಯ ಸವಿ ತಿಂದಾಗಲೂ
ನಾನಾಗುವೆ ಭಾವುಕ ಈ ಜೀವನದ ಸುತ್ತಾ, ಪ್ರತಿನಿತ್ಯ

ಏಕೆ ಹೀಗೆಂದು ಪ್ರಶ್ನಿಸ ಹೊರಡುವೆ
ಉತ್ತರ ಸಿಗದೇ ಕೊರಗುತಲಿರುವೆ
ಒಮ್ಮೊಮ್ಮೆ ಭಾವುಕತೆಯಲ್ಲಿ ಬಂದಿಸಲ್ಪಡುವೆ
ಭಾರಿ ಭಾರಿ ನಾನಾಗಿಯೇ ಬಿಡುಗಡೆ ಪಡುವೆ
ನಾನಾಗುವೆ ಭಾವುಕ ಯೋಚಿಸುತ್ತಾ, ಮರುಗುತ್ತಾ, ಕೊರಗುತ್ತಾ

ಅಂತರಾಳದ ಸತ್ಯಗಳು ಮುದುಡಿಕೊಂಡಾಗ
ನೈಜ ಘಟನೆಗಳು ತಿಳಿದುಹೋದಾಗ
ಮಮತೆ, ಸ್ನೇಹ, ಪ್ರೀತಿ ಅರ್ಥಹೀನವಾದಾಗ
ನಾನಾಗುವೆ ಭಾವುಕ ಮನಸು ಮಗುವಾದಾಗ, ಸಲಹುವವರು ಸಿಗದಾಗ

ಕವನ ೮ : ಹೋಗಿ ಬಾ ಗೆಳೆಯ
 
ನನ್ನ ಜೀವನದಲ್ಲಿ ಬಹಳ ಪ್ರಭಾವ ಬೀರಿದ ಗೆಳೆಯರೊಬ್ಬರಿದ್ದಾರೆ. ನನ್ನಲ್ಲಾದ ಸಾಕಷ್ಟು ಬದಲಾವಣೆಗಳಿಗೆ ಅವರೇ ಕಾರಣ. ಅವರೊಂದಿಗೆ ನಾ ಕಳೆದ ಪ್ರತಿ ಕ್ಷಣ ಅಮೂಲ್ಯ, ಎಲ್ಲಾ ಕಲಿಕೆಯ ಕ್ಷಣ. ನನ್ನ ಪಾಲಿಗೆ ಅವರೇ ಗುರು. PUC ಯಲ್ಲಿ ಹಾಸ್ಟೆಲ್ ನಲ್ಲಿದ್ದಾಗ ಅವರ ಜೊತೆ ಬೆರೆಯುವ ಅವಕಾಶ ಸಿಕ್ಕಿತ್ತು. ಅವರು second year PUC ಮುಗಿಸಿದ ನಂತರ ಊರಿಗೆ ಹೊರಟ ಸಂದರ್ಭದಲ್ಲಿ ನನ್ನಲ್ಲಿ ಮೂಡಿದ ಶುಭ ಹಾರೈಕೆಯ ಕವನ ಹೀಗಿದೆ..

ಹೋಗಿ ಬಾ ಗೆಳೆಯ ಹೋಗಿ ಬಾ
ಹೋಗುವಾಗ ಮರೆಯದೆ ಒಯ್ಯಿ
ಇಲ್ಲಿನ ಎಲ್ಲಾ ನೆನಪುಗಳನ್ನ
ಹೊರೆಯಾದವೆಂದು ಕಟಿಣ ಧೋರಣೆಯ
ತಾಳದಿರು, ಹೊತ್ತೊಯ್ದರೆ ಸವಿಯಾದ
ನೆನಪುಗಳಾಗಿ ಕಾಡಬಹುದು

ಪ್ರತಿ ಹಂತಗಳ ಬದಲಾವಣೆಗಳು
ಹೊರಬೇಕಾದ ಜವಾಬ್ದಾರಿಗಳು
ಕಾಡುತ್ತಲಿರುತ್ತವೆ ನೆರಳಂತೆ

ಈ ಹಂತದವರೆಗೂ ಸಹಕರಿಸಿದವರನ್ನ ನೆನೆಸಿ
ಬೆಳಕ ಕೊಡುವ ಬದುಕ ನಡೆಸಿ
ಎಲ್ಲರ ಕ್ಷೇಮಕ್ಕೆ ಅದನ್ನ ಸವೆಸಿ
ದಿನಗಳ ಕಳೆಯುವುದು ಸ್ಪೂರ್ತಿದಾಯಕ

ಹಳೆಯ ಹರುಷದೊಂದಿಗೆ, ಹೊಸ ಹುರುಪಿನೊಂದಿಗೆ
ಸಾಧಿಸಿದ ಸಾರ್ಥಕತೆಯೊಂದಿಗೆ
ಸಾಗುತಿರಲಿ ನಿನ್ನ ಯಶಸ್ಸಿನ ಜೀವನ
ಹೋಗಿ ಬಾ ಗೆಳೆಯ ಹೋಗಿ ಬಾ

ಕವನ ೯ : ನಟಸಾರ್ವಭೌಮ

ಒಬ್ಬ ಅಪ್ಪಟ ಕನ್ನಡಿಗನಾಗಿ ರಾಜಕುಮಾರ್ ಚಿತ್ರಗಳನ್ನ ನೋಡದೆ, ಅನಂದಿಸದೆ, ಅಸ್ವಾದಿಸದೆ ಇರಲು ಸಾಧ್ಯವೇ ಇಲ್ಲ.  
ಒಬ್ಬ ಸಾಮಾನ್ಯ  ಮನುಷ್ಯ ಅಸಮಾನ್ಯವಾದುದನ್ನು ಸಾದಿಸಬಹುದು ಎಂಬುದಕ್ಕೆ ಒಂದು ಉದಾಹರಣೆ ರಾಜಕುಮಾರ್. ಒಬ್ಬ ಸಿನಿಮಾ ನಟ ಎಂಬುದಕ್ಕಿಂತ ಅವರೊಬ್ಬ ಜನಪದ ವ್ಯಕ್ತಿ. ಜನಸಾಮಾನ್ಯರ ಜೀವನಕ್ಕೆ ಹತ್ತಿರವಾದ ಸಿನೆಮಾಗಳಲ್ಲಿ ನಟಿಸಿ ಪ್ರೇರೇಪಿಸಿದ ಮಹಾನ್ ನಟ. ಸಮಯ ಇದ್ದಾಗ ಅವರ ಬಗ್ಗೆ ಒಂದು ಲೇಖನ ಬರೆಯುವೆ.. ಈಗ ಅವರ ಬಗ್ಗೆ ನಾ ಬರೆದ ಒಂದು ಕವನ ಇಲ್ಲಿದೆ ಓದ್ಕೊಳ್ಳಿ...

ನಾಟಕ ಕಳೆಯನ್ನ ಸರ್ವಸ್ವ ಎಂದು ಬೆಳೆದು
ಬದುಕ ತಿಳಿಸೋ ದಾರಿಯಲಿ ನಡೆದು
ಹಾಡುಗಳಿಗೆ ಇಂಪನ್ನು ಪೊರೆದು
ಮಾತುಗಳಲ್ಲೇ ಕನ್ನಡ ಕಂಪನ್ನ ಹರಿಸಿದ
ನಿಮಗೆ ನಮನಗಳು ಹೃದಯಪೂರ್ವಕ ನಮನಗಳು

ಶಿಲೆಗಳೆಂಬ ಪಾತ್ರಗಳಿಗೆ ಜೀವ ಕೊಟ್ಟು
ಜೀವನೋತ್ಸಾಹವನ್ನು ಅಭಿನಯದಿ ಇಟ್ಟು
ನೋಡುಗರ ಹೃದಯಗಳನ್ನ ಆಕ್ರಮಿಸುವಷ್ಟು
ಸರ್ವರನ್ನು ಸಂತೃಪ್ತಿಪಡಿಸಲು ಸಫಲರಾದ
ನಿಮಗೆ ನಮನಗಳು ಪ್ರೀತಿಪೂರ್ವಕ ನಮನಗಳು

ತಾಳ್ಮೆಯ, ತ್ಯಾಗದ, ಗಂಭೀರದ
ಭಕ್ತಿಪೂರ್ವಕವಾದ, ಶಾಂತಸ್ವರೂಪಿಯಾದ
ಏರುಸ್ತಾಯಿ ಕಂಟದ, ಆಕ್ರಮಣಕಾರಿ ಮಾತುಗಳ
ಸುಂದರ ಮುಕಾರವಿಂದದ, ಉತ್ಪ್ರೇಕ್ಷೆಗೆ ನಿಲುಕದ
ನಿಮಗೆ ನಮನಗಳು ಭಕ್ತಿಪೂರ್ವಕ ನಮನಗಳು

ಪೌರಾಣಿಕ ಪಾತ್ರಗಳಂತೂ ಸಾರಿದವು ಕನ್ನಡ ಸಂಸ್ಕೃತಿ
ಸಾಮಾಜಿಕ ಪಾತ್ರಗಳು ತಿಳಿಸಿದವು ಜೀವನದ ಇತಿ ಮಿತಿ
ಇತಿಹಾಸಾದಾರಿತ ಪಾತ್ರಗಳು ಹೆಚ್ಚಿಸಿದವು ಕನ್ನಡ ಭಕುತಿ
ಹಾಡಿದ ಹಾಡುಗಳು ಗಳಿಸಿಕೊಂಡವು ಶಾಶ್ವತ ನೆಲೆಯನ್ನ
ನಮನಗಳು ಪ್ರಚಂಡ ಸಾಧಕನಿಗೆ ಶರಣಾಗತರೆಲ್ಲರ ನಮನಗಳು

ಕವನ ೧೦ : ಕವಿಯಾದೆ

ಕವಿಯಾದೆ ಓ ಚೆಲುವೆ ನಿನ್ನಿಂದ ನಾ ಕವಿಯಾದೆ
ನಿನ್ನಂದವ ವರ್ಣಿಸಲೆಂದೇ ನಾ ಕವಿಯಾದೆ
ನಿನ ಚಂದವ ಸವಿಯಲೆಂದೇ ನಾ ಹೀಗಾದೆ
ಕವಿಯದೆ ಓ ಸ್ಪೂರ್ತಿಯೇ ನಿನ್ನಿಂದ ನಾ ಕವಿಯಾದೆ

ಕನಸುಗಳಲಿ ನೀ ಬಂದು ಹೋದಾಗ
ಮೆತ್ತನೆ ತಿಳಿಯದೆ ಮುತ್ತನಿಟ್ಟಾಗ
ನೂರಾರು ಆಸೆಗಳನು ಹೊಮ್ಮಿಸಿದಾಗ
ನನಗೆ ತಿಳಿಯದಂತೆ ನಾ ಕವಿಯಾದೆ
ನಿನ್ನ ರೂಪವ ಬಂನಿಸಲೆಂದೇ ನಾ ಹೀಗಾದೆ

ಹೃದಯದ ಗೂಡಲ್ಲಿ ನೀ ಅವಿತಾಗ
ಒಂದೊಂದು ಕೂಗಿಗೂ ಕುಲುಕಿದಾಗ
ಆಸರೆಯಾಸೆಯಲ್ಲಿ ಮುಳುಗಿ ಹೋದಾಗ
ಮೂಕ ನಗು ಸುರಿಸುತ್ತಾ ಕವಿಯಾದೆ
ನಿನ್ನ ಸೆಳೆತದೆ ಸೋತು ನಾ ಹೀಗಾದೆ

ನನ್ನೆದುರು ಬಂದಾಗ ಪಕ್ಕದಿ ನಿಂತಾಗ
ನನ್ನ ಭಾವನೆಗಳಿಗೆ ಜೀವ ಬಂದಾಗ
ಎಲ್ಲ ಚಲನವಲನದಲ್ಲೂ ನೀ ತುಂಬಿದಾಗ
ಕಲ್ಪನೆಗಳ ಆಗರದಲ್ಲಿ ಕವಿಯಾದೆ
ಪರಸ್ಪರ ಮಾತನಾಡಲು ನಾ ಹೀಗಾದೆ





ಭಾನುವಾರ, ಜೂನ್ 26, 2011

Missing Bhubaneshwar !!

ಸುಮಾರು 2 ವರ್ಷಗಳ ಕೆಳಗೆ TCS ಗೆ ನಾನು ಸೇರಿದ ನಂತರ, ಒರಿಸ್ಸಾದ ಭುವನೇಶ್ವರ್ನಲ್ಲಿ 1st phase training ಇತ್ತು. Training ಮುಗಿಸಿಕೊಂಡು ಟ್ರೈನ್ನಲ್ಲಿ ಬೆಂಗಳೂರಿಗೆ ವಾಪಸು ಬರುವಾಗ, ಅಲ್ಲಿ ಆದ ಸುಂದರ ಅನುಭವಗಳನ್ನ ಕುರಿತಾಗಿ ಪದ್ಯ ಬರೆದೆ, ಸ್ನೇಹಿತರಿಗೆ ತೋರಿಸಿ ಖುಷಿ ಹಂಚಿಕೊಂಡಿದ್ದೆ. ಭುವನೇಶ್ವರ್ ನನ್ನ ಜೀವನದಲ್ಲಿ ಕರ್ನಾಟಕದಿಂದ ಹೊರ ಹೋಗಿ ನಾನು ನೋಡಿದ ಮೊದಲ ಸ್ಥಳ. ಒಂದು ರೀತಿ ಮರೆಯಲಾಗದಂತ ಅನುಭವಗಳನ್ನ ಭುವನೇಶ್ವರ್ ನನಗೆ ನೀಡಿದೆ ಎಂದರೆ ತಪ್ಪಾಗೋಲ್ಲ. ಕೆಳಗಿನ 4 stanzaಗಳಲ್ಲಿ ಭುವನೇಶ್ವರ್ ಚಿತ್ರಣ ಮಾಡಿಲ್ಲವಾದರೂ ಮುಂದೆಂದಾದರೂ ಅದರ ಬಗ್ಗೆ ಒಂದು ಲೇಖನ ಬರೆಯುವ ಪ್ರಯತ್ನ ಖಂಡಿತ ಮಾಡುವೆ. 
ಆಕಸ್ಮಾತಾಗಿ ಇಂದು ದೊರೆತ ಆ ಕವನ ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನಿಸಿತು, ಹೀಗಿವೆ ಆ ಸಾಲುಗಳು,

ಒಲ್ಲದ ಮನಸ್ಸಿನಿಂದ ಹೊರಡುತಿರುವೆ
ಒಲುಮೆಯ ಊರಿನೆಡೆಗೆ
ಕಳೆದ ಕೆಲವು ದಿನಗಳು ಕಾಡುತಿವೆ
ಮರೆಯಲಾಗದಷ್ಟು, ಅಡಿಗಡಿಗೆ
ಜೀವನದ ಪಯಣದಲ್ಲಿ ನಿಲ್ದಾಣಗಳೇ ಇಲ್ಲದಿದ್ದಿದ್ದರೆ ಹೇಗಿರುತ್ತಿತ್ತು..?
I am really missing Bhuvaneshwar !!


ರವಿ ಮೂಡದೆ ಬೆಳಕಾಗದಿದ್ದರೆ ಹೇಗಿರುತ್ತಿತ್ತು..?
ಬೆಳಕಿಲ್ಲದೆ ಬದುಕಬೇಕಿದ್ದರೆ ಹೇಗಿರುತ್ತಿತ್ತು..?
ಅಪರಿಚಿತರೊಡನೆ ಅವಿನಾಭಾವವಾಗಿ ಬೇರೆಯದಿದ್ದರೆ ಹೇಗಿರುತ್ತಿತ್ತು..?
I am really missing Room 3, Block 22, Phase 2


ಹಕ್ಕಿಗಳು ಹಾರದಿದ್ದರೆ ಹೇಗಿರುತ್ತಿತ್ತು..?
ಮನುಷ್ಯನಿಗೆ ಸಂಪನ್ಮೂಲಗಳೇ ಬೇಕಿರದಿದ್ದರೆ ಹೇಗಿರುತ್ತಿತ್ತು..?
ಅವಶ್ಯಕತೆಗಳೆಲ್ಲಾ ಪೂರೈಕೆಯಾಗದಿದ್ದರೆ ಹೇಗಿರುತ್ತಿತ್ತು..?
ಸುಂದರ ವೇದಿಕೆಗೆ ಸದಸ್ಯರಾಗದಿದ್ದರೆ ಹೇಗಿರುತ್ತಿತ್ತು..?
I am really missing ILP centre of TCS

ಪರಸ್ಪರ ಆಕಸ್ಮಿಕ ಭೇಟಿಗಳಾಗದಿದ್ದರೆ ಹೇಗಿರುತ್ತಿತ್ತು..?
ಆ ಭೇಟಿಗಳಲ್ಲಿ ಬಯಸಿದವರು ಸಿಕ್ಕರೆ ಹೇಗಿರುತ್ತಿತ್ತು..?
ಬಯಸಿದವರು ಜೀವನದ ಭಾಗಿಯಾದರೆ ಹೇಗಿರುತ್ತಿತ್ತು..?
ಭಾಗಿಯಾಗಿ ಬಂಧಿಸಲ್ಪಟ್ಟಿದ್ದರೆ ಹೇಗಿರುತ್ತಿತ್ತು..?
 I am truly missing .........

ಮಂಗಳವಾರ, ಮೇ 17, 2011

ಅವಳ ಬಗ್ಗೆ

ನೀ ನನ್ನ ನೋಡದಿದ್ದರೆನಂತೆ
ನಿನ್ನ ಮುದ್ದು ಮುಖದ ನೆನಪುಗಳು ಸಾಕು
ಬರುವ ದಿನಗಳನು ಉಲ್ಲಾಸದಿ ಕಳೆಯಲಿಕ್ಕೆ,
ಉತ್ಸಾಹದಿ ಮುನ್ನುಗ್ಗಲಿಕ್ಕೆ

ನೀ ನನ್ನೆಡೆಗೆ ನಗು ಬೀರದಿದ್ದರೇನಂತೆ
ನನ್ನ ಕಾಡಿದ ಮುಗುಳ್ನಗು ಸಾಕು
ಹತಾಶೆಗಳ ಮಗ್ಗುಲು ಮುರಿಯಲಿಕ್ಕೆ,
ಹೊಸ ಭರವಸೆಗಳಲಿ ಬದುಕಲಿಕ್ಕೆ

ನೀ ನನ್ನೊಡನೆ ಮಾತಾಡದಿದ್ದರೇನಂತೆ
ನಾ ಕೇಳಿದ ಸಿಹಿ ದನಿ ಸಾಕು
ಆನಂದದಿ ಆಸ್ವಾದಿಸಲಿಕ್ಕೆ,
ಆಕಾಶದಿ ಸ್ವಚ್ಚಂದದಿ ಹಾರಡಲಿಕ್ಕೆ

ನೀ ನನ್ನ ಒಪ್ಪಿ ಅಪ್ಪದಿದ್ದರೇನಂತೆ
ನನ್ನ ತಬ್ಬಿ ಮುತ್ತಿಕ್ಕಿದ ಕನಸುಗಳು ಸಾಕು
ಹೊಸ ಕನಸುಗಳನು ಕಾಣಲಿಕ್ಕೆ,
ಪ್ರತಿ ಇರುಳು ಹುರುಪಿನೊಂದಿಗೆ ನಿದ್ದೆಗೆ ಜಾರಲಿಕ್ಕೆ !!
 


ಬುಧವಾರ, ಮೇ 11, 2011

ನೊಂದವರ ನಗಿಸದ ನಗರಗಳ ಅಭಿವೃದ್ದಿ ಆದರೇನೂ, ಆಗದಿದ್ದರೇನೂ !!

ಮೂಲಭೂತ ಸೌಕರ್ಯಗಳಾದ ನೀರು, ಕೈಗೆಟುಕುವ ಬೆಲೆಯಲ್ಲಿ ದಿನಸಿ ಮತ್ತು ತರಕಾರಿಗಳು, ಬಳಸಲು ಅರ್ಹವಾದ ರಸ್ತೆಗಳು, ಯೋಗ್ಯವಾದ ಚರಂಡಿ ವ್ಯವಸ್ಥೆ, ದಿನನಿತ್ಯದ ಕೆಲಸಗಳಿಗೆ ಭರಿಸಬಹುದಾದ ಸಾರಿಗೆ ವ್ಯವಸ್ಥೆ, ಆದಾಯಕ್ಕನುಸಾರವಾಗಿ ಎಲ್ಲಾ ಮಕ್ಕಳಿಗೆ ಏಕರೂಪದ ಶಿಕ್ಷಣ, ಅರ್ಹತೆಗನುಗುಣವಾಗಿ ಎಲ್ಲರಿಗೆ ಉದ್ಯೋಗ!!. ಏನೋ ಕನಸಿನ ಲೋಕದಲ್ಲಿ ವಿಹಾರಕ್ಕೆ ಕರೆದೊಯ್ದ ಅನುಭವ ಆಗ್ತಿದಿಯಾ?! ಖಂಡಿತ ಇಲ್ಲಾ, ಯಾವುದೇ ಪ್ರದೇಶದ(ಹಳ್ಳಿ, ಪಟ್ಟಣ, ನಗರ) ಅಭಿವೃದ್ದಿಯನ್ನ ಅಳೆಯುವುದು ಮೇಲಿನವುಗಳ ಲಭ್ಯತೆಯ ಮೇಲೆಯೇ.

ಆದರೆ ಅದಕ್ಕೆ ತದ್ವಿರುದ್ದವಾಗಿ ಅಭಿವೃದ್ದಿಯ ನೆಪದಲ್ಲಿ ಕೇವಲ ಆಡಳಿತಾಶಾಹಿಗಳ, ಹುಂಬ ಶ್ರೀಮಂತರ, ಸುಲಿಗೆಕೋರರ, ಕಟು ಸ್ವಾರ್ಥಿಗಳ ಆಡಂಬರದ ಜೀವನಕ್ಕೆ ದಾರಿ ಮಾಡಿಕೊಟ್ಟಂತ್ತಾಗಿದೆ.  ಅಭಿವೃದ್ದಿ ಎಂದರೆ ನಗರದಲ್ಲಿ ಎಷ್ಟು ಮಲ್ಟಿಪ್ಲೆಕ್ಸ್, ಎಷ್ಟು ಶಾಪಿಂಗ್ ಮಾಲ್, ಮಜಾ ಮಾಡಲು ಎಷ್ಟು ಪಬ್, ಹಣ ಕಳೆಯಲು ಎಷ್ಟು ಸ್ಟಾರ್ ಹೋಟೆಲ್, ತಿರುಗಾಡಲು ಎಷ್ಟು ವೋಲ್ವೋ ಬಸ್, ಯಾವ ಯಾವ ಏರಿಯಾದಲ್ಲಿ ಎಷ್ಟೆಷ್ಟು ಸೈಟು ಕೊಳ್ಳೆ ಹೊಡೆದು ಹಂಚಲಾಗಿದೆ ಅನ್ನುವುದಲ್ಲ. ಅಭಿವೃದ್ದಿಯೆಂಬುದು ಅನಾಥರ, ದೀನರ, ನೊಂದವರ ಉನ್ನತ್ತೀಕರಣಕ್ಕೆ ನೆರವಾಗಬೇಕು. ಪ್ರತಿಯೊಬ್ಬರಿಗೂ ಸಮಾನವಾಗಿ ಸಂಪನ್ಮೂಲಗಳ ಹಂಚಿಕೆಯಾಗಬೇಕು. ಮನುಷ್ಯ ಮನುಷ್ಯರ ನಡುವೆ ಪ್ರೀತಿ ಆದರಗಳು ಬೆಳೆಯಬೇಕು. ಎಲ್ಲರಲ್ಲಿರುವ ತುಚ್ಚ ನೀಚ ಸ್ವಾರ್ಥ ಕಡಿಮೆಯಾಗಬೇಕು.

ಇದನೆಲ್ಲ ಸಾಕಾರಗೊಳಿಸುವ ಸಾಮರ್ಥ್ಯ ಇರುವುದು ಕೇವಲ ವಿದ್ಯಾವಂತ ಯುವಕರಿಗೆ ಮಾತ್ರ. ಮೊದಲು ಚುನಾವಣೆಯಲ್ಲಿ ಯೋಗ್ಯ ಅಭ್ಯರ್ಥಿಗಳ ಆಯ್ಕೆಗೆ ವೋಟು ಹಾಕಬೇಕು ಹಾಗೂ ಮನೆಯವರಿಗೆ, ಅಕ್ಕಪಕ್ಕದಲ್ಲಿರುವ  ಅನಕ್ಷರಸ್ಥರಿಗೆ ಅರಿವು ಮೂಡಿಸಬೇಕು. ದುಡಿಯುತ್ತಿರುವ ಯುವಕರು ದೇಶಾದ್ಯಂತ ನಿರ್ಗತಿಕರ ಉನ್ನತಿಗೆ ಶ್ರಮಿಸುತ್ತಿರುವ ಚಾರಿಟಿಗಳಿಗೆ ಕೈಲಾದ ಸಹಾಯ ಮಾಡಬೇಕು. ಅನ್ಯಾಯ ಅಕ್ರಮಗಳ ವಿರುದ್ದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ನಗರಗಳಿಗೆ ವಿಲಾಸಿ ಜೀವನದ ಆಸೆಯಿಂದ ವಲಸೆ ಬರುವುದನ್ನು ಬಿಟ್ಟು  ವ್ಯವಸಾಯದಂಥ ಶ್ರೇಷ್ಠ ಕೆಲಸವನ್ನ
ಮುಂದುವರೆಸಿ ಇತರರಿಗೆ ಮಾದರಿಯಾಗಬೇಕು. ಪಠ್ಯ ಪುಸ್ತಕದ ಜ್ಞಾನಕ್ಕಿಂತ ಸಾಮಾನ್ಯ ಜ್ಞಾನ ಮುಖ್ಯ ಎಂಬುದು ತಿಳಿದುಕೊಳ್ಳಬೇಕು.  





  
 
 

ಬುಧವಾರ, ಮೇ 4, 2011

ಅವಳಧರ ಸುಮಧುರ !!

 ನಲ್ಲೆಯ ಮೃದು ಅಧರ ಕರೆದಿದೆ
ಸಿಹಿಯ ಸವಿಯಲೆಂದು
ನನ್ನಧರ ಅವಳಧರ ಜೊತೆ ಸೇರಿ, ಜೇನ ಹೀರಿ
ಆನಂದದಿ ಜೇಂಕರಿಸಲೆಂದು
  
ಅಧರದ ಸವಿ ಸವಿದು, ಅದರಲ್ಲೇ ಕಾಲ ಸವೆದು
ಹುಚ್ಚೆಬ್ಬಿಸಿದೆ ಮಧುಲೋಕದ ಸೊಬಗು
ಮಧುಲೋಕದ ಅಮಲು ಮೈಯ್ಯಾವರಿಸಿ
ಇಹಲೋಕವ ಮರೆಸಿದೆ, ಎಂಥಾ ಬೆರಗು!!

ಬೆರಗು ಮೂಡಿಸಿ, ಮತ್ತಿನಲಿ ಮದವೇರಿಸಿ
ಕಾಡಿದೆ ದಿನ ದಿನ ಅನುಕ್ಷಣ
ಅವಳಧರ ಸತ್ಯ, ಸುಮಧುರ