ಬುಧವಾರ, ಮೇ 4, 2011

ಅವಳಧರ ಸುಮಧುರ !!

 ನಲ್ಲೆಯ ಮೃದು ಅಧರ ಕರೆದಿದೆ
ಸಿಹಿಯ ಸವಿಯಲೆಂದು
ನನ್ನಧರ ಅವಳಧರ ಜೊತೆ ಸೇರಿ, ಜೇನ ಹೀರಿ
ಆನಂದದಿ ಜೇಂಕರಿಸಲೆಂದು
  
ಅಧರದ ಸವಿ ಸವಿದು, ಅದರಲ್ಲೇ ಕಾಲ ಸವೆದು
ಹುಚ್ಚೆಬ್ಬಿಸಿದೆ ಮಧುಲೋಕದ ಸೊಬಗು
ಮಧುಲೋಕದ ಅಮಲು ಮೈಯ್ಯಾವರಿಸಿ
ಇಹಲೋಕವ ಮರೆಸಿದೆ, ಎಂಥಾ ಬೆರಗು!!

ಬೆರಗು ಮೂಡಿಸಿ, ಮತ್ತಿನಲಿ ಮದವೇರಿಸಿ
ಕಾಡಿದೆ ದಿನ ದಿನ ಅನುಕ್ಷಣ
ಅವಳಧರ ಸತ್ಯ, ಸುಮಧುರ

2 ಕಾಮೆಂಟ್‌ಗಳು:

  1. ಚೆನ್ನಾಗಿದೆ! ಇನ್ನು ದಿನಕ್ಕೊಂದು ಪೋಸ್ಟ್ ಮಾಡ್ತಾ ಇರು. ಬರವಣಿಗೆ ಚೆನ್ನಾಗಿದೆ.

    ಪ್ರತ್ಯುತ್ತರಅಳಿಸಿ
  2. ಚೆನ್ನಾಗಿದೆ ಪ್ರದೀಪ , ಹೀಗೆ ಬರಿತಾ ಇರು ....

    ಜೆನ್ನೋಣ ಮಧು ಹೀರಿ ,
    ಮಲೆನಾಡೆಲ್ಲ ಹಾರಾಡಿತಂತೆ , ಹಾಗೆ ಕೆಲವು ಸುಂದರ ಅನುಭವಗಳು ವರ್ಣನಾತಿತ .

    ನನ್ನ ಒಂದು ಮಾತು ,
    ರಸಿಕತೆಗೆ ನೂರಾರು ಕಥೆಗಳು ,
    ಈ ಎಲ್ಲ ಕಥೆಗಳು ಸುಂದರ ಸೌಖ್ಯಗಳು .....

    ಪ್ರತ್ಯುತ್ತರಅಳಿಸಿ