ಮಂಗಳವಾರ, ಮೇ 17, 2011

ಅವಳ ಬಗ್ಗೆ

ನೀ ನನ್ನ ನೋಡದಿದ್ದರೆನಂತೆ
ನಿನ್ನ ಮುದ್ದು ಮುಖದ ನೆನಪುಗಳು ಸಾಕು
ಬರುವ ದಿನಗಳನು ಉಲ್ಲಾಸದಿ ಕಳೆಯಲಿಕ್ಕೆ,
ಉತ್ಸಾಹದಿ ಮುನ್ನುಗ್ಗಲಿಕ್ಕೆ

ನೀ ನನ್ನೆಡೆಗೆ ನಗು ಬೀರದಿದ್ದರೇನಂತೆ
ನನ್ನ ಕಾಡಿದ ಮುಗುಳ್ನಗು ಸಾಕು
ಹತಾಶೆಗಳ ಮಗ್ಗುಲು ಮುರಿಯಲಿಕ್ಕೆ,
ಹೊಸ ಭರವಸೆಗಳಲಿ ಬದುಕಲಿಕ್ಕೆ

ನೀ ನನ್ನೊಡನೆ ಮಾತಾಡದಿದ್ದರೇನಂತೆ
ನಾ ಕೇಳಿದ ಸಿಹಿ ದನಿ ಸಾಕು
ಆನಂದದಿ ಆಸ್ವಾದಿಸಲಿಕ್ಕೆ,
ಆಕಾಶದಿ ಸ್ವಚ್ಚಂದದಿ ಹಾರಡಲಿಕ್ಕೆ

ನೀ ನನ್ನ ಒಪ್ಪಿ ಅಪ್ಪದಿದ್ದರೇನಂತೆ
ನನ್ನ ತಬ್ಬಿ ಮುತ್ತಿಕ್ಕಿದ ಕನಸುಗಳು ಸಾಕು
ಹೊಸ ಕನಸುಗಳನು ಕಾಣಲಿಕ್ಕೆ,
ಪ್ರತಿ ಇರುಳು ಹುರುಪಿನೊಂದಿಗೆ ನಿದ್ದೆಗೆ ಜಾರಲಿಕ್ಕೆ !!
 


2 ಕಾಮೆಂಟ್‌ಗಳು:

  1. ವಾವ್ ವಾವ್ ವಾವ್ ! ಕ್ಯಾ ಬಾತ್ ಹೇಯ್ ! ಯಾವಾಳಪ್ಪ ಆ ನಿನ್ನ ಕನಸಿನ ರಾಣಿ ! ನಿದ್ದೆ ನಲ್ಲೂ ಕಾಡುವವಳು ? :)
    ಅನುಭವದ ಮಾತಿದ್ದ ಹಾಗೆ ಇದೆ . ಇದು ನಿಜವೋ ಕಲ್ಪನೆಯೋ ತಿಳಿಯದಾಗಿದೆ . ಕವನ ಮಾತ್ರ ಮನದ ಮಾತನ್ನ ಹಾಗೆಯೇ ಅಚ್ಚಿಳಿಸಿದ ಹಾಗಿದೆ.

    ಪ್ರತ್ಯುತ್ತರಅಳಿಸಿ
  2. ಇಷ್ಟವಾಯಿತು ಕಣೋ ...

    ನನ್ನ ಮನಸಿಗೆ ಬಂದಿದ್ದು ,

    ನೀ ನನಗೆ ಒಲಿಯದಿದ್ದರೆನಂತೆ ,
    ನಿನ್ನ ಸೌಂದರ್ಯ ವರ್ಣನೆಯ ಕನಸುಗಳೇ ಸಾಕು ,
    ನನ್ನ ಉಳಿದ ಜೀವನ ಸಾಗಿಸಲಿಕ್ಕೆ ,
    ಮುಂದಿನ ಜನ್ಮದಲ್ಲೂ ನನ್ನ ಮನ ನಿನ್ನನ್ನು ಹಂಬಲಿಸಲಿ ....

    ಪ್ರತ್ಯುತ್ತರಅಳಿಸಿ