ಮೋಡಗಳ ಸಮ್ಮಿಲನದಿ
ಸುರಿವ ಜಡಿ ಮಳೆಗೆ
ಧರೆ ಎದೆಯೊಡ್ಡಿ ಸ್ವಾಗತಿಸಿದೆ
ಹಾಲುಗಲ್ಲದ ಶಶಿಯ ಚುಂಬಿಸಲು
ಸಾಗರದಲೆಗಳ
ಭೋರ್ಗರೆತ ಮುಗಿಲುಮುಟ್ಟಿದೆ
ಹಕ್ಕಿಗಳ ನಾದಕೆ ಹೂಗಳ ಅಂದಕೆ
ಮನ ಸೋತ ಪ್ರಕೃತಿ
ನೆಲೆ ನೀಡಿ ಸಲಹುತಿದೆ
ಆ ಧರೆ, ಶಾಂತ ಸಾಗರ, ಸಹೃದಯಿ ಪ್ರಕೃತಿಗಳನು
ಶರಣಾಗಿಸಿದೆ, ಪ್ರೀತಿಯ ಬಂಧನ
ನನ್ನ ಸ್ಪಂದನಕೆ, ಯಾವಾಗ ನಿನ್ನ ಪ್ರತಿಸ್ಪಂದನ..??
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ